ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಅವರು ಸ್ಫೋಟಕ ಬ್ಯಾಟಿಂಗ್ ಮೂಲಕ ರಂಜಿಸಿದರೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಲಾತ್ಮಕ ಹೊಡೆತ ಮತ್ತು ಆಕ್ರಮಣಕಾರಿ ಶೈಲಿಯಿಂದ ಗಮನ ಸೆಳೆಯುತ್ತಾರೆ. ಸದ್ಯ ಈ ಇಬ್ಬರೂ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದಾರೆ.
ಕ್ಷೇತ್ರರಕ್ಷಣೆಯಲ್ಲಿಯೂ ಮಿಂಚಿನ ಆಟವಾಡುವ ಈ ಇಬ್ಬರಲ್ಲಿ ಕ್ರಿಕೆಟ್ ದಿಗ್ಗಜರು ಯಾರನ್ನು ಇಷ್ಟಪಡುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ. ಹಾಗಾಗಿ ಈ ಕುರಿತು ಅಭಿಮಾನಿಯೊಬ್ಬರು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಬ್ರಾಡ್ ಹಾಗ್ ಮತ್ತು ಟಾಮ್ ಮೂಡಿಯವರನ್ನುಟ್ವಿಟರ್ನಲ್ಲಿ ಪ್ರಶ್ನಿಸಿದ್ದರು.
ರಾಘವ್ ಅಗರ್ವಾಲ್ ಎನ್ನುವವರು, ‘ನಿವೃತ್ತಿಯ ನಂತರವೂ ಎಬಿ ಡಿ ವಿಲಿಯರ್ಸ್ ಅಮೋಘ ಫಾರ್ಮ್ನಲ್ಲಿದ್ದಾರೆ. ವಿರಾಟ್ ಕೊಹ್ಲಿಯೂ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ನಿಮ್ಮ ಪ್ರಕಾರ ಎಬಿ ಡಿ ಮತ್ತು ಕೊಹ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠ ಬ್ಯಾಟ್ಸ್ಮನ್’ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಹಾಗ್, ‘ಕೊಹ್ಲಿ’ ಎಂದು ಉತ್ತರಿಸಿದ್ದಾರೆ. ಆ ಮಾತನ್ನು ಅಂಕಿಅಂಶಗಳೇ ಬೆಂಬಲಿಸುತ್ತವೆ ಎಂದೂ ಹೇಳಿದ್ದಾರೆ.
ವಿರಾಟ್ ಕೊಹ್ಲಿಬ್ಯಾಟಿಂಗ್ ಸಾಧನೆ
–– | ಪಂದ್ಯ | ಇನಿಂಗ್ಸ್ | ರನ್ | ಶತಕ | ಅರ್ಧಶತಕ | ದ್ವಿಶತಕ | ಗರಿಷ್ಠ |
ಟೆಸ್ಟ್ | 86 | 145 | 7240 | 27 | 22 | 7 | 254 |
ಏಕದಿನ | 248 | 239 | 11867 | 43 | 58 | – | 183 |
ಟಿ20 | 81 | 76 | 2794 | – | 24 | – | 94 |
ಐಪಿಎಲ್ | 177 | 169 | 5412 | 5 | 36 | – | 113 |
ಎಬಿ ಡಿ ವಿಲಿಯರ್ಸ್ಬ್ಯಾಟಿಂಗ್ ಸಾಧನೆ
–– | ಪಂದ್ಯ | ಇನಿಂಗ್ಸ್ | ರನ್ | ಶತಕ | ಅರ್ಧಶತಕ | ದ್ವಿಶತಕ | ಗರಿಷ್ಠ |
ಟೆಸ್ಟ್ | 114 | 191 | 8765 | 22 | 46 | 2 | 278 |
ಏಕದಿನ | 228 | 218 | 9577 | 25 | 53 | – | 176 |
ಟಿ20 | 78 | 75 | 1672 | – | 10 | – | 79 |
ಐಪಿಎಲ್ | 154 | 142 | 4395 | 3 | 33 | – | 133 |
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.