ADVERTISEMENT

ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದ 6 ಸಾವಿರ ರನ್‌: ಸಚಿನ್ ದಾಖಲೆ ಮುರಿದ ವಿರಾಟ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 14:30 IST
Last Updated 31 ಆಗಸ್ಟ್ 2018, 14:30 IST
   

ಸೌಥಾಂಪ್ಟನ್‌:ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ವೇಳೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ 6 ಸಾವಿರ ರನ್‌ ಕಲೆಹಾಕಿದ ಸಾಧನೆ ಮಾಡಿದರು.

ಪಂದ್ಯಕ್ಕೂ ಮುನ್ನ 69 ಟೆಸ್ಟ್‌ ಪಂದ್ಯಗಳ 118 ಇನಿಂಗ್ಸ್‌ಗಳಿಂದ 5994 ರನ್‌ ಕಲೆ ಹಾಕಿದ್ದ ಅವರು 6ರನ್‌ ಗಳಿಸಿದ್ದ ವೇಳೆ 6 ಸಾವಿರದ ಗಡಿ ದಾಟಿದರು. ಇದರೊಂದಿಗೆ 76 ಪಂದ್ಯಗಳ 120 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದ ಬ್ಯಾಟಿಂಗ್‌ ಮಾಂತ್ರಿಕ ಸಚಿನ್‌ ತೆಂಡೂಲ್ಕರ್‌ ಅವರನ್ನು ಹಿಂದಿಕ್ಕಿ, ಭಾರತ ಪರ ವೇಗವಾಗಿ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

Congratulations @imVkohli on reaching 6,000 Test runs! #ENGvIND pic.twitter.com/7cO3rYMfR5

ADVERTISEMENT

117 ಇನಿಂಗ್ಸ್‌ಗಳಲ್ಲಿ ಇಷ್ಟು ರನ್‌ ಕಲೆಹಾಕಿರುವ ಸುನಿಲ್‌ ಗಾವಾಸ್ಕರ್‌ ಭಾರತ ಪರಮೊದಲ ಸ್ಥಾನದಲ್ಲಿದ್ದಾರೆ.

ಒಟ್ಟಾರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ 6 ಸಾವಿರ ರನ್‌ ಕಲೆ ಹಾಕಿದ ವಿಶ್ವ ದಾಖಲೆ ಇರುವುದು ಬ್ಯಾಟಿಂಗ್‌ ದಂತಕತೆಡಾನ್‌ ಬ್ರಾಡ್ಮನ್‌ಹೆಸರಿನಲ್ಲಿ. ಅವರು ಕೇವಲ68 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಸ್ಥಾಪಿಸಿದ್ದಾರೆ. ನಂತರದ ಸ್ಥಾನದಲ್ಲಿ ವೆಸ್ಟ್‌ಇಂಡೀಸ್‌ ಬ್ಯಾಟ್ಸ್‌ಮನ್‌ ಗ್ಯಾರಿ ಸೋಬರ್ಸ್‌ ಇದ್ದಾರೆ.

ವೇಗವಾಗಿ 6 ಸಾವಿರ ರನ್‌ ಕಲೆಹಾಕಿದ ಹತ್ತು ಬ್ಯಾಟ್ಸ್‌ಮನ್‌ಗಳು

ಆಟಗಾರ ದೇಶ ಪಂದ್ಯ ಇನಿಂಗ್ಸ್‌
ಡಾನ್‌ ಬ್ರಾಡ್ಮನ್‌ ಆಸ್ಟ್ರೇಲಿಯಾ 45 68
ಗ್ಯಾರಿ ಸೋಬರ್ಸ್‌ ವೆಸ್ಟ್‌ಇಂಡೀಸ್‌ 65 111
ಸ್ಟೀವ್‌ ಸ್ಮಿತ್‌ ಆಸ್ಟ್ರೇಲಿಯಾ 61 111
ವಾಲಿ ಹ್ಯಾಮ್ಮಂಡ್‌ ಇಂಗ್ಲೆಂಡ್‌ 70 114
ಲೇನ್‌ ಹಟ್ಟನ್‌ ಇಂಗ್ಲೆಂಡ್‌ 66 116
ಕೇನ್‌ ಬ್ಯಾರಿಂಗ್ಟನ್‌ ಇಂಗ್ಲೆಂಡ್‌ 72 116
ಕುಮಾರ ಸಂಗಾಕ್ಕರ ಶ್ರೀಲಂಕಾ 71 116
ಸುನೀಲ್‌ ಗವಾಸ್ಕರ್‌ ಭಾರತ 65 117
ವಿರಾಟ್‌ ಕೊಹ್ಲಿ ಭಾರತ 70 119
ವಿವಿಯನ್‌ ರಿಚರ್ಡ್ಸ್‌ ವೆಸ್ಟ್‌ಇಂಡೀಸ್‌ 81 120

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.