ADVERTISEMENT

ಟೆಸ್ಟ್ ಕ್ರಿಕೆಟ್‌ಗೆ ಉತ್ಸಾಹದಿಂದ ಪ್ರೋತ್ಸಾಹ ನೀಡಿದ ಕೊಹ್ಲಿಗೆ ಧನ್ಯವಾದ: ವಾರ್ನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2022, 10:41 IST
Last Updated 16 ಜನವರಿ 2022, 10:41 IST
ಶೇನ್‌ ವಾರ್ನ್‌ (ಒಳಚಿತ್ರದಲ್ಲಿ ವಿರಾಟ್‌ ಕೊಹ್ಲಿ )
ಶೇನ್‌ ವಾರ್ನ್‌ (ಒಳಚಿತ್ರದಲ್ಲಿ ವಿರಾಟ್‌ ಕೊಹ್ಲಿ )   

ನವದೆಹಲಿ: ಟೆಸ್ಟ್‌ಕ್ರಿಕೆಟ್‌ ಅನ್ನು ಅತ್ಯುತ್ಸಾಹದಿಂದ ಪ್ರೋತ್ಸಾಹಿಸಿದವಿರಾಟ್‌ ಕೊಹ್ಲಿ ಅವರಿಗೆ ಧನ್ಯವಾದಗಳು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್‌ ವಾರ್ನ್‌ ಪ್ರತಿಕ್ರಿಯಿಸಿದ್ದಾರೆ.

ಭಾರತ ಟೆಸ್ಟ್‌ ಕ್ರಿಕೆಟ್‌ ತಂಡವನ್ನು ಏಳು ವರ್ಷಗಳಿಂದ ಮುನ್ನಡೆಸಿದ್ದ ಕೊಹ್ಲಿ‌, ಶನಿವಾರ ನಾಯಕತ್ವ ತೊರೆದಿದ್ದರು. ಸ್ಪಿನ್‌ ದಂತಕತೆ ಎನಿಸಿಕೊಂಡಿರುವ ವಾರ್ನ್‌, ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಅತ್ಯುತ್ತಮ ಸಾಧನೆ ಮಾಡಿದೆ ಎಂದೂ ಶ್ಲಾಘಿಸಿದ್ದಾರೆ.

'ನಿಮ್ಮ ನಾಯಕತ್ವದಲ್ಲಿ ನೀವು ಮತ್ತು ನಿಮ್ಮ ತಂಡ ಮಾಡಿರುವ ಸಾಧನೆಗೆ ಅಭಿನಂದನೆಗಳು. ಟೆಸ್ಟ್‌ ಕ್ರಿಕೆಟ್‌ ಅನ್ನುಅತ್ಯುತ್ಸಾಹದಿಂದ ಬೆಂಬಲಿಸಿದ್ದಕ್ಕೆ ಮತ್ತು ಅದನ್ನು ಕ್ರಿಕೆಟ್‌ನನಂ.1ಮಾದರಿಯನ್ನಾಗಿ ಖಾತರಿ ಪಡಿಸಿದ್ದಕ್ಕೆ ಧನ್ಯವಾದಗಳು' ಎಂದುಟ್ವೀಟ್‌ ಮಾಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೊಹ್ಲಿ ಭಾರತದ ಯಶಸ್ವಿ ನಾಯಕ ಎನಿಸಿದ್ದಾರೆ.68ಪಂದ್ಯಗಳಲ್ಲಿ ತಂಡ ಮುನ್ನಡೆಸಿರುವ ಅವರು,58.82ರ ಸರಾಸರಿಯಲ್ಲಿ40ಜಯ ತಂದುಕೊಟ್ಟಿದ್ದಾರೆ.

ನಾಯಕನಾದ ಬಳಿಕ ಕೊಹ್ಲಿ, ಶ್ರೀಲಂಕಾದಲ್ಲಿ 2015ರಲ್ಲಿ ಮೊದಲ ಸರಣಿ ಗೆಲುವು ಕಂಡಿದ್ದರು. ಅದರೊಂದಿಗೆಭಾರತ,22 ವರ್ಷಗಳ ಬಳಿಕ ದ್ವೀಪ ರಾಷ್ಟ್ರದಲ್ಲಿ ಸರಣಿ ಜಯಿಸಿದ ದಾಖಲೆ ಮಾಡಿತ್ತು.

ಕೊಹ್ಲಿ ನಾಯಕ‌ತ್ವದಲ್ಲಿ ಭಾರತ ತಂಡ ತವರಿನಲ್ಲಿ ಆಡಿದ31 ಪಂದ್ಯಗಳ ಪೈಕಿ 24ರಲ್ಲಿ ಜಯ ಸಾಧಿಸಿದೆ. ಕೇವಲ ಎರಡು ಪಂದ್ಯಗಳಲ್ಲಿ ಮಾತ್ರವೇ ಸೋಲು ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.