ADVERTISEMENT

ಪತ್ನಿ ಅನುಷ್ಕಾ, ಸಹ ಆಟಗಾರರೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡ ವಿರಾಟ್‌ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2022, 11:18 IST
Last Updated 1 ಜನವರಿ 2022, 11:18 IST
ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಚಿತ್ರ
ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಚಿತ್ರ    

ಪತ್ನಿ ಅನುಷ್ಕಾ ಹಾಗೂ ಭಾರತ ತಂಡದ ಸಹ ಆಟಗಾರರೊಂದಿಗೆ ನಾಯಕ ವಿರಾಟ್‌ ಕೊಹ್ಲಿಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.

ಈ ಕುರಿತ ಫೋಟೊಗಳನ್ನು ಟ್ವೀಟ್‌ ಮಾಡಿರುವ ಅವರು, ‘ಈ ಹೊಸ ವರ್ಷವುಎಲ್ಲರಿಗೂ ಸಂತಸವನ್ನು ಕರುಣಿಸಲಿಎಂದು ನಾವುಆಶಿಸುತ್ತೇವೆ. ಪ್ರೀತಿಹಾಗೂ ಧನಾತ್ಮಕತೆಯನ್ನುನಾವು ನಿಮಗೆ ಕಳಿಸುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಸೆಂಚುರಿಯನ್‌ನಸೂಪರ್‌ ಸ್ಪೋರ್ಟ್‌ ಪಾರ್ಕ್‌ನಲ್ಲಿ ಗುರುವಾರ ಮುಕ್ತಾಯಗೊಂಡ ಟೆಸ್ಟ್‌ ಪಂದ್ಯದಲ್ಲಿ ಭಾರತ 113 ರನ್‌ಗಳಿಂದ ಜಯ ಗಳಿಸಿತ್ತು. ಈ ಮೂಲಕ ಭಾರತ ತಂಡ ಸೆಂಚುರಿಯನ್‌ನಲ್ಲಿ ಮೊದಲ ಪಂದ್ಯ ಗೆದ್ದ ಸಾಧನೆ ಮಾಡಿತ್ತು. ಇದು ಭಾರತಕ್ಕೆ ವರ್ಷಾಂತ್ಯದಲ್ಲಿ ಸಂಭ್ರಮ ತಂದಿದೆ.

ADVERTISEMENT

ಸೆಂಚುರಿಯನ್‌ನಲ್ಲಿ ಭಾರತಕ್ಕೆ ಮೊದಲ ಜಯ ಗಳಿಸಿಕೊಟ್ಟ ನಾಯಕ ಎಂಬ ಖ್ಯಾತಿಗೆವಿರಾಟ್ ಕೊಹ್ಲಿ ಒಳಗಾಗಿದ್ದಾರೆ.ನಾಯಕನಾಗಿ 40ಕ್ಕೂ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಗೆದ್ದ ನಾಲ್ಕನೇ ಆಟಗಾರನೆಂಬ ಹೆಗ್ಗಳಿಕೆಗೂಕೊಹ್ಲಿಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.