ADVERTISEMENT

ಭಾರತ-ಪಾಕ್ ಪಂದ್ಯವಿಲ್ಲದ ಟೆಸ್ಟ್‌ ಚಾಂಪಿಯನ್‌ಷಿಪ್‌ಗೆ ಅರ್ಥವಿಲ್ಲ: ವಕಾರ್

ಭಾರತ–ಪಾಕ್‌ ಪಂದ್ಯವಿಲ್ಲದ್ದಕ್ಕೆ ವಕಾರ್‌ ಟೀಕೆ

ಪಿಟಿಐ
Published 17 ಮಾರ್ಚ್ 2020, 19:22 IST
Last Updated 17 ಮಾರ್ಚ್ 2020, 19:22 IST
ವಕಾರ್ ಯೂನಿಸ್
ವಕಾರ್ ಯೂನಿಸ್   

ಕರಾಚಿ: ಭಾರತ–ಪಾಕಿಸ್ತಾನ ತಂಡಗಳ ನಡುವೆ ಒಂದೂ ಪಂದ್ಯವಿಲ್ಲದ ಟೆಸ್ಟ್‌ ಚಾಂಪಿಯನ್‌ಷಿಪ್‌ಗೆ ಅರ್ಥವಿಲ್ಲ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ವಕಾರ್‌ ಯೂನಿಸ್‌ ಟೀಕಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ ಒಂಬತ್ತು ಸ್ಥಾನಗಳಲ್ಲಿರುವ ತಂಡಗಳು ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಹಣಾಹಣಿ ನಡೆಸುತ್ತಿವೆ. ಪ್ರತಿ ತಂಡಗಳು ಪರಸ್ಪರ ಆಯ್ಕೆ ಮಾಡಿಕೊಂಡ ತಂಡಗಳೊಡನೆ ಆರು ದ್ವಿಪಕ್ಷೀಯ ಟೆಸ್ಟ್‌ ಸರಣಿಗಳನ್ನು ಆಡುತ್ತಿವೆ. ಲೀಗ್‌ ಪಂದ್ಯಗಳ ಕೊನೆಯಲ್ಲಿ ಅತಿ ಹೆಚ್ಚು ಪಾಯಿಂಟ್ಸ್‌ ಕಲೆಹಾಕಿದ ಎರಡೂ ತಂಡಗಳು 2021ರ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

‘ಭಾರತ ಮತ್ತು ಪಾಕಿಸ್ತಾನ ಸರಕಾರಗಳ ಮಟ್ಟದಲ್ಲೇ ಸ್ಥಿತಿ ಉತ್ತಮವಾಗಿಲ್ಲ. ಈ ಹಂತದಲ್ಲಿ ಐಸಿಸಿ ಪ್ರಮುಖ ಪಾತ್ರ ವಹಿಸಬೇಕಿದೆ. ಐಸಿಸಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು’ ಎಂದು ಯೂಟ್ಯೂಬ್‌ ಚಾನೆಲ್‌ ‘ಕ್ರಿಕೆಟ್‌ ಬಾಜ್‌’ಗೆ ನೀಡಿದ ಸಂದರ್ಶನದಲ್ಲಿ ವಕಾರ್‌ ಹೇಳಿದ್ದಾರೆ.

ADVERTISEMENT

2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಕ್ರಿಕೆಟ್‌ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. 2007ರಿಂದ ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಟೆಸ್ಟ್‌ ಸರಣಿ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.