ADVERTISEMENT

ತವರಿನ ಅಂಗಣದಲ್ಲಿ ಆಡಿದ ವಾರ್ನರ್‌

ಏಜೆನ್ಸೀಸ್
Published 10 ನವೆಂಬರ್ 2018, 20:36 IST
Last Updated 10 ನವೆಂಬರ್ 2018, 20:36 IST

ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ನಿಷೇಧಕ್ಕೆ ಒಳಗಾಗಿರುವ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಡೇವಿಡ್ ವಾರ್ನರ್‌ ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್ ಜೊತೆ ತವರಿನ ಅಂಗಣದಲ್ಲಿ ಶನಿವಾರ ಆಡಿದರು. ಪ್ರಕರಣದ ನಂತರ ವಾರ್ನರ್ ತವರಿನಲ್ಲಿ ಆಡಿದ್ದು ಇದೇ ಮೊದಲ ಬಾರಿ.

ಗೂಗಿ ಓವಲ್‌ನಲ್ಲಿ ನಡೆದ ದೇಶಿ ಪಂದ್ಯದಲ್ಲಿ ಅವರು ಸಿಡ್ನಿ ಕ್ಲಬ್ ತಂಡಕ್ಕಾಗಿ ಆಡಿದ್ದರು. ಆದರೆ ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಸ್ಟೀವ್ ವಾ ಪುತ್ರ ಆಸ್ಟಿನ್‌ ವಾ ಅವರು ವಾರ್ನರ್ ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT