ADVERTISEMENT

ಆರ್‌ಆರ್ ಮೊದಲ ಬಾರಿ ಟ್ರೋಫಿ ಗೆದ್ದಾಗ ಅಂಡರ್-16 ಕ್ರಿಕೆಟ್ ಆಡುತ್ತಿದ್ದೆ: ಸಂಜು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2022, 11:20 IST
Last Updated 29 ಮೇ 2022, 11:20 IST
ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್   

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪ್ರಶಸ್ತಿ ಜಯಿಸಿತ್ತು.

2008ರಲ್ಲಿ ರಾಜಸ್ಥಾನ್ ಮೊದಲ ಬಾರಿಗೆ ಟ್ರೋಫಿ ಗೆದ್ದಾಗ ಸಂಜು ಸ್ಯಾಮ್ಸನ್ ಅಂಡರ್-16 ಕ್ರಿಕೆಟ್ ಆಡುತ್ತಿದ್ದರು. ಇದನ್ನು ಸ್ವತಃ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.

ಅಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೂರು ವಿಕೆಟ್ ಅಂತರದ ಗೆಲುವು ದಾಖಲಿಸಿದ್ದ ರಾಜಸ್ಥಾನ್, ಟ್ರೋಫಿ ಜಯಿಸಿತ್ತು. ರಾಜಸ್ಥಾನ್ ತಂಡದ ಮಾಜಿ ನಾಯಕ ಶೇನ್ ವಾರ್ನ್ ಹಾಗೂ ಸೊಹೈಲ್ ತನ್ವೀರ್ ಗೆಲುವಿನ ರನ್ ಗಳಿಸಿದ್ದರು.

ರಾಜಸ್ಥಾನ್ ತಂಡವು 14 ವರ್ಷಗಳ ಬಳಿಕ ಮತ್ತೆ ಫೈನಲ್‌ಗೆ ಲಗ್ಗೆಯಿಟ್ಟಿದೆ. ಎರಡು ತಿಂಗಳ ಹಿಂದೆ ಸಾವಿಗೀಡಾದ ಶೇನ್ ವಾರ್ನ್‌ ಅವರಿಗಾಗಿ ಪ್ರಶಸ್ತಿ ಗೆಲ್ಲುವ ಇರಾದೆಯನ್ನು ಸಂಜು ವ್ಯಕ್ತಪಡಿಸಿದ್ದಾರೆ.

ಅತ್ತ ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಗುಜರಾತ್ ಟೈಟನ್ಸ್, ಪದಾರ್ಪಣೆ ಆವೃತ್ತಿಯಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ ಸಾಧನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.