ದುಬೈ: ಭಾರತದ ಸೂಪರ್‌ಸ್ಟಾರ್ ಕ್ರಿಕೆಟಿಗರನ್ನು ಹತ್ತಿರದಿಂದ ನೋಡಲು ರೆಹಮಾನ್ ಝೈದ್ ಮತ್ತು ಫಾತೀಮಾ ಅವರು ಓಮನ್‌ನಿಂದ ದುಬೈಗೆ ಬಂದಿದ್ದರು. ಅವರಿಗೆ ನಿರಾಸೆಯಾಗಲಿಲ್ಲ. ಹಲವು ದಿನಗಳ ಅವರ ಕನಸು ಈಡೇರಿತು. 17 ವರ್ಷದ ಫಾತೀಮಾ ಅವರು ಟೀಶರ್ಟ್ ಮೇಲೆ ಶ್ರೇಯಸ್ ಅಯ್ಯರ್ ಅವರ ಹಸ್ತಾಕ್ಷರ ಪಡೆದರು.
ಖ್ಯಾತನಾಮ ಕ್ರಿಕೆಟಿಗರು ಆಡುವುದನ್ನು ನೋಡಲು ಇಲ್ಲಿ ಹೆಚ್ಚು ಅವಕಾಶಗಳು ಸಿಗುವುದಿಲ್ಲ. ಇದೀಗ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ ಆಡಲು ಭಾರತ ತಂಡವು ಇಲ್ಲಿ ಬಂದಿರುವುದರಿಂದ ಅಭಿಮಾನಿಗಳು ಪುಳಕಗೊಂಡಿದ್ದಾರೆ.
ಐಸಿಸಿ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣಕ್ಕೆ ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಬೇರೆ ಬೇರೆ ಕಡೆಯ ಅಭಿಮಾನಿಗಳು ಇಲ್ಲಿ ಬಂದು ಸೇರುತ್ತಿದ್ದಾರೆ.
ಸೋಮವಾರ ಸಂಜೆ ನಡೆದ ನೆಟ್ಸ್‌ನಲ್ಲಿ ಭಾರತದ ಆಟಗಾರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರನ್ನು ನೋಡಲು ಜನರು ಮುಗಿಬಿದ್ದರು.
‘ಶ್ರೇಯಸ್ ಹಸ್ತಾಕ್ಷರ ನೀಡಿದರು. ವಿರಾಟ್ ಕೊಹ್ಲಿ ಅವರನ್ನು ತುಂಬಾ ಹತ್ತಿರದಿಂದ ನೋಡುವ ಅವಕಾಶ ದೊರೆಯಿತು. ಆಟಗಾರರೊಂದಿಗೆ ಮಾತನಾಡಲು ಅವಕಾಶ ಕೊಟ್ಟ ಐಸಿಸಿಗೆ ಧನ್ಯವಾದಗಳು’ ಎಂದು ಫಾತೀಮಾ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.