ADVERTISEMENT

ಡಬ್ಲ್ಯುಸಿಎಲ್‌: ಭಾರತ-ಪಾಕ್‌ ಪಂದ್ಯ ರದ್ದು

ಪಿಟಿಐ
Published 21 ಜುಲೈ 2025, 20:50 IST
Last Updated 21 ಜುಲೈ 2025, 20:50 IST
<div class="paragraphs"><p>ಭಾರತ -ಪಾಕ್‌ ಧ್ವಜ</p></div>

ಭಾರತ -ಪಾಕ್‌ ಧ್ವಜ

   

ಬರ್ಮಿಂಗ್‌ಹ್ಯಾಮ್‌ : ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್‌ (ಡಬ್ಲ್ಯುಸಿಎಲ್‌) ಟೂರ್ನಿಯಲ್ಲಿ ಭಾನುವಾರ ನಡೆಯಬೇಕಿದ್ದ ಭಾರತ– ಪಾಕಿಸ್ತಾನ ನಡುವಿನ ಪಂದ್ಯವನ್ನು ರದ್ದು
ಗೊಳಿಸಲಾಗಿದೆ.

ಭಾರತ ಲೆಜೆಂಡ್ಸ್​ ತಂಡದ ಕೆಲ ಆಟಗಾರರು ಪಾಕಿಸ್ತಾನದ ಜೊತೆಗೆ ಆಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಬ್ಲ್ಯುಸಿಎಲ್‌ ಆಯೋಜಕರು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ADVERTISEMENT

ಪಹಲ್ಗಾಮ್‌ ದಾಳಿ ಹಾಗೂ ಇತ್ತೀಚಿಗೆ ಉಭಯ ದೇಶಗಳ ನಡುವೆ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಶಿಖರ್‌ ಧವನ್‌ ಸೇರಿದಂತೆ ಭಾರತ ತಂಡದ ಆಟಗಾರರು ಪಾಕ್‌ ಜೊತೆ ಪಂದ್ಯವಾಡಲು ನಿರಾಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.