ADVERTISEMENT

ಪಾಕ್ ಟೆಸ್ಟ್‌: ಮೂರನೇ ದಿನ ಕೈಕೊಟ್ಟ ಹವಾಮಾನ

ಏಜೆನ್ಸೀಸ್
Published 14 ಡಿಸೆಂಬರ್ 2019, 5:43 IST
Last Updated 14 ಡಿಸೆಂಬರ್ 2019, 5:43 IST
ಶ್ರೀಲಂಕಾದ ಧನಂಜಯ ಡಿ ಸಿಲ್ವಾ –ಎಎಫ್‌ಪಿ ಚಿತ್ರ
ಶ್ರೀಲಂಕಾದ ಧನಂಜಯ ಡಿ ಸಿಲ್ವಾ –ಎಎಫ್‌ಪಿ ಚಿತ್ರ   

ರಾವಲ್ಪಿಂಡಿ: ಪ್ರವಾಸಿ ಶ್ರೀಲಂಕಾ ಎದುರಿನ ಪಾಕಿಸ್ತಾನದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದ ಆಟಕ್ಕೆ ಹವಾಮಾನ ವೈಪರೀತ್ಯ ಅಡ್ಡಿಯಾಯಿತು. ಆದ್ದರಿಂದ 27 ನಿಮಿಷಗಳ ಆಟ ಮಾತ್ರ ನಡೆಯಿತು.

ದಿನದ ಮೊದಲ ಅವಧಿಯ ಆಟವನ್ನು ಸಂಪೂರ್ಣವಾಗಿ ಕೈಬಿಡಲಾಯಿತು. ಭೋಜನ ನಂತರ ಆಟ ಆರಂಭವಾಯಿತಾದರೂ 5.2 ಓವರ್‌ಗಳನ್ನು ಮಾತ್ರ ಮಾಡಲಾಯಿತು. ಹೀಗಾಗಿ ಮೂರು ದಿನಗಳಲ್ಲಿ ಒಟ್ಟು 91 ಓವರ್‌ಗಳ ಆಟ ನಡೆದಂತಾಯಿತು.

ಎರಡನೇ ದಿನದಾಟದ ಮುಕ್ತಾಯಕ್ಕೆ ಶ್ರೀಲಂಕಾ 6ಕ್ಕೆ 236 ರನ್ ಗಳಿಸಿತ್ತು. ಈ ಮೊತ್ತಕ್ಕೆ ಶುಕ್ರವಾರ 19 ರನ್‌ಗಳನ್ನು ಸೇರಿಸಿಕೊಂಡಿತು. ಮೊದಲ ಎರಡು ದಿನ ಮಳೆ ಅಡ್ಡಿಪಡಿಸಿದ್ದರಿಂದ ಆಟ ಪದೇ ಪದೇ ನಿಂತಿತ್ತು. ಹೀಗಾಗಿ ಶುಕ್ರವಾರ ಪಿಚ್ ಕೂಡ ಹಾಳಾಗಿತ್ತು.

ADVERTISEMENT

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ, ಮೊದಲ ಇನಿಂಗ್ಸ್‌: 91.5 ಓವರ್‌ಗಳಲ್ಲಿ 6ಕ್ಕೆ 282 (ಧನಂಜಯ ಡಿ ಸಿಲ್ವಾ ಔಟಾಗದೆ 97, ದಿಲ್ರುವಾನ್ ಪೆರೇರ ಔಟಾಗದೆ 6; ಮೊಹಮ್ಮದ್ ಅಬ್ಬಾಸ್ 56ಕ್ಕೆ1, ಶಾಹಿನ್ ಅಫ್ರಿದಿ 58ಕ್ಕೆ2, ಉಸ್ಮಾನ್ ಶಿನ್ವಾರಿ 54ಕ್ಕೆ1, ನಸೀಂ ಶಾ 83ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.