ADVERTISEMENT

ICC Womens World Cup: ಬಾಂಗ್ಲಾದೇಶ ಎದುರು ವೆಸ್ಟ್ ಇಂಡೀಸ್‌ಗೆ ರೋಚಕ ಜಯ

ಅಲ್ಪಮೊತ್ತದ ಗುರಿ ತಲುಪುವಲ್ಲಿ ಎಡವಿದ ಬಾಂಗ್ಲಾ: ಮಿಂಚಿದ ಹೇಯಲಿ ಮ್ಯಾಥ್ಯೂಸ್, ಶರ್ಮೈನ್

ಪಿಟಿಐ
Published 18 ಮಾರ್ಚ್ 2022, 17:58 IST
Last Updated 18 ಮಾರ್ಚ್ 2022, 17:58 IST
ವೆಸ್ಟ್ ಇಂಡೀಸ್‌ ತಂಡದ ಹೆಯಲಿ ಮ್ಯಾಥ್ಯೂಸ್ ಮತ್ತು ಶೆಮೈನ್ ಕ್ಯಾಂಪ್‌ಬೆಲ್  –ಎಎಫ್‌ಪಿ ಚಿತ್ರ
ವೆಸ್ಟ್ ಇಂಡೀಸ್‌ ತಂಡದ ಹೆಯಲಿ ಮ್ಯಾಥ್ಯೂಸ್ ಮತ್ತು ಶೆಮೈನ್ ಕ್ಯಾಂಪ್‌ಬೆಲ್  –ಎಎಫ್‌ಪಿ ಚಿತ್ರ   

ಮೌಂಟ್ ಮಾಂಗನೂಯಿ: ಆಫ್‌ಸ್ಪಿನ್ನರ್ ಹೇಯಲಿ ಮ್ಯಾಥ್ಯೂಸ್ ಅಮೋಘ ಬೌಲಿಂಗ್‌ನಿಂದ ವೆಸ್ಟ್ ಇಂಡೀಸ್ ತಂಡವು ಬಾಂಗ್ಲಾದೇಶ ಎದುರು ನಾಲ್ಕು ರನ್‌ಗಳಿಂದ ರೋಚಕ ಜಯ ಗಳಿಸಿತು.

ಬೇ ಓವಲ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ತಂಡದ ಬೌಲರ್‌ಗಳ ಶಿಸ್ತಿನ ದಾಳಿಯ ಮುಂದೆ ವಿಂಡೀಸ್ ಬಳಗವನ್ನು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 140 ರನ್‌ಗಳ ಅಲ್ಪಮೊತ್ತ ಗಳಿಸಿತು. ಶರ್ಮೈನ್ ಕ್ಯಾಂಪ್‌ಬೆಲ್ (ಅಜೇಯ 53; 107ಎಸೆತ, 4X5) ಅವರೊಬ್ಬರೇ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಬಾಂಗ್ಲಾ ತಂಡದ ಸಲ್ಮಾ ಖಾತೂನ್ ಮತ್ತು ನಾಹೀದಾ ಅಖ್ತರ್ ತಲಾ ಎರಡು ವಿಕೆಟ್ ಗಳಿಸಿದರು.

ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ತಂಡ ಎಡವಿತು. 49.3 ಓವರ್‌ಗಳಲ್ಲಿ 136 ರನ್‌ಗಳಿಗೆ ಆಲೌಟ್ ಆಯಿತು. ಹೇಯಲಿ (15ಕ್ಕೆ4) ಅಫೈ ಅಖ್ತರ್ (29ಕ್ಕೆ3) ಮತ್ತು ಸ್ಟೇಫಾನಿ ಟೇಲರ್ (29ಕ್ಕೆ3) ಬಾಂಗ್ಲಾ ತಂಡದ ಕೈಯಿಂದ ಗೆಲುವು ಕಸಿದುಕೊಂಡರು.

ADVERTISEMENT

ನಾಯಕಿ ನೈಜರ್ ಸುಲ್ತಾನಾ ಮತ್ತು ನಾಹೀದಾ ಅಖ್ತರ್ ತಲಾ 25 ರನ್‌ ಗಳಿಸಿದರು. ನಾಹೀದಾ ಕೊನೆಯ ಹಂತದಲ್ಲಿ ದಿಟ್ಟ ಹೋರಾಟ ತೋರಿದರು. ಇದರಿಂದಾಗಿ ಪಂದ್ಯವು ರೋಚಕ ಅಂತ್ಯ ಕಂಡಿತು.

ಸಂಕ್ಷಿಪ್ತ ಸ್ಕೋರು
ವೆಸ್ಟ್ ಇಂಡೀಸ್:
50 ಓವರ್‌ಗಳಲ್ಲಿ 9ಕ್ಕೆ 140 (ಶೆಮೈನ್ ಕ್ಯಾಂಪ್‌ಬೆಲ್ ಔಟಾಗದೆ 53, ಸಲ್ಮಾ ಖಾತೂನ್ 23ಕ್ಕೆ2, ನಾಹೀದಾ ಅಕ್ತರ್ 23ಕ್ಕೆ2)
ಬಾಂಗ್ಲಾದೇಶ: 49.3 ಓವರ್‌ಗಳಲ್ಲಿ 136 (ನಾಹೀದಾ ಅಕ್ತರ್ ಔಟಾಗದೆ 25, ನಿಜಾರ್ ಸುಲ್ತಾನಾ 25, ಹೆಯಲಿ ಮ್ಯಾಥ್ಯೂಸ್ 15ಕ್ಕೆ4, ಅಫೈ ಫ್ಲೆಚರ್ 29ಕ್ಕೆ3, ಸ್ಟೇಫಾನಿ ಟೇಲರ್ 29ಕ್ಕೆ3)
ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 4 ರನ್‌ಗಳಿಂದ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.