ADVERTISEMENT

ಟೆಸ್ಟ್‌ ಕ್ರಿಕೆಟ್: ವಿಹಾರಿ ತಾಳ್ಮೆಯ ಶತಕ

ಪಿಟಿಐ
Published 31 ಆಗಸ್ಟ್ 2019, 20:39 IST
Last Updated 31 ಆಗಸ್ಟ್ 2019, 20:39 IST
ಹನುಮ ವಿಹಾರಿ
ಹನುಮ ವಿಹಾರಿ   

ಜಮೈಕಾ: ಹನುಮವಿಹಾರಿ (111, 225 ಎಸೆತ, 16 ಬೌಂಡರಿ) ಅವರ ತಾಳ್ಳೆಯ ಶತಕದ ಬಲದಿಂದ ಭಾರತ ಕ್ರಿಕೆಟ್‌ ತಂಡವು ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್‌ನಲ್ಲಿ ಉತ್ತಮ ಮೊತ್ತ ಪೇರಿಸಿತು.

ಪಂದ್ಯದ ಎರಡನೇ ದಿನವಾದ ಶನಿವಾರ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 140.1 ಓವರ್‌ಗಳಲ್ಲಿ 416 ರನ್ ಗಳಿಸಿ ಆಲ್‌ ಔಟ್‌ ಆಯಿತು.

ಮೊದಲ ದಿನ ಆರಂಭಿಕ ಹಂತದಲ್ಲಿಯೇ ಎಡವಿದ್ದ ಭಾರತ ನಂತರ ಮಯಂಕ್ ಅಗರವಾಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ಬಲದಿಂದ ಚೇತರಿಸಿಕೊಂಡಿತ್ತು.

ADVERTISEMENT

ಶನಿವಾರ ವಿರಾಟ್ ಅವರಿಗೆ ಶತಕ ಪೂರೈಸುವ ಆಸೆ ಕೈಗೂಡಲಿಲ್ಲ. ವಿಂಡೀಸ್ ವೇಗಿ ಜೇಸನ್ ಹೋಲ್ಡರ್ ವಿರಾಟ್ ವಿಕೆಟ್‌ ಕಬಳಿಸಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಅಜಿಂಕ್ಯ ರಹಾನೆ ಕೂಡ ತಾಳ್ಮೆಯ ಆಟವಾಡಿದರು. ಆದರೆ ಕೇವಲ 24 ರನ್‌ ಗಳಿಸಿದರು. ಕೆಮರ್ ರೋಚ್ ಬೌಲಿಂಗ್‌ನಲ್ಲಿ ಅವರು ಔಟಾದರು. ರಿಷಭ್ ಪಂತ್ (27 ರನ್) ಅವರು ಗಟ್ಟಿಯಾಗಿ ಹೆಜ್ಜೆಯೂರಲು ಜೇಸನ್ ಹೋಲ್ಡರ್‌ ಬಿಡಲಿಲ್ಲ. ಅವರನ್ನೂ ಕ್ಲೀನ್‌ ಬೌಲ್ಡ್‌ ಮಾಡಿ ಸಂಭ್ರಮಿಸಿದರು. ರವೀಂದ್ರ ಜಡೇಜ (16) ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾದರು. ಹನುಮವಿಹಾರಿ ಹಾಗೂ ಇಶಾಂತ್‌ ಶರ್ಮಾ( 57, 80 ಎಸೆತ, 7 ಬೌಂಡರಿ) ಅವರ ಅಮೋಘ ಆಟದಿಂದ ತಂಡವು ನಾಲ್ಕುನೂರು ರನ್‌ಗಳ ಗಡಿ ದಾಟಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಭಾರತ: 140.1 ಓವರ್‌ಗಳಲ್ಲಿ 416 ( ವಿರಾಟ್ ಕೊಹ್ಲಿ 76, ಇಶಾಂತ್‌ ಶರ್ಮಾ 57, ಅಜಿಂಕ್ಯ ರಹಾನೆ 24, ಹನುಮ ವಿಹಾರಿ ಬ್ಯಾಟಿಂಗ್ 111, ರಿಷಭ್ ಪಂತ್ 27, ರವೀಂದ್ರ ಜಡೇಜ 16, ಜೇಸನ್ ಹೋಲ್ಡರ್ 77ಕ್ಕೆ5, ಕೆಮರ್ ರೋಚ್ 77ಕ್ಕೆ1, ರಹಕೀಮ್ ಕಾರ್ನ್‌ವಾಲ್ 105ಕ್ಕೆ2) ವಿವರ ಅಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.