ADVERTISEMENT

ಮಹಿಳಾ ಕ್ರಿಕೆಟ್‌: ಇಂದ್ರಾಣಿ ರಾಯ್‌ಗೆ ಅವಕಾಶ

ಪಿಟಿಐ
Published 14 ಮೇ 2021, 19:31 IST
Last Updated 14 ಮೇ 2021, 19:31 IST
ಹರ್ಮನ್‌ಪ್ರೀತ್ ಕೌರ್‌ –ಪಿಟಿಐ ಚಿತ್ರ
ಹರ್ಮನ್‌ಪ್ರೀತ್ ಕೌರ್‌ –ಪಿಟಿಐ ಚಿತ್ರ   

ನವದೆಹಲಿ: ಜಾರ್ಖಂಡ್‌ನ ವಿಕೆಟ್ ಕೀಪರ್ ಬ್ಯಾಟರ್ ಇಂದ್ರಾಣಿ ರಾಯ್‌ ಅವರಿಗೆ ಮಹಿಳಾ ಕ್ರಿಕೆಟ್‌ನ ಟೆಸ್ಟ್, ಏಕದಿನ ಮತ್ತು ಟಿ20 ತಂಡದಲ್ಲಿ ಅವಕಾಶ ನೀಡಲಾಗಿದ್ದು ಶಫಾಲಿ ವರ್ಮಾ ಮತ್ತು ಶಿಖಾ ಪಾಂಡೆ ಅವರನ್ನು ಕರೆಸಿಕೊಳ್ಳಲಾಗಿದೆ. ಗಾಯದಿಂದ ಬಳಲುತ್ತಿರುವ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಸರಣಿಗೆ ತಂಡವನ್ನು ನೀತು ಡೇವಿಡ್ ಅಧ್ಯಕ್ಷತೆಯ ಆಯ್ಕೆ ಸಮಿತಿ ಶುಕ್ರವಾರ ಆರಿಸಿದೆ. ದೇಶಿ ಕ್ರಿಕೆಟ್‌ನಲ್ಲಿ ಇಂದ್ರಾಣಿ ಜೊತೆ ಅಮೋಘ ಆಟವಾಡಿದ ಸ್ನೇಹಾ ರಾಣಾ ಅವರಿಗೂ ಅವಕಾಶ ನೀಡಲಾಗಿದೆ. ಮೋನಿಕಾ ಪಟೇಲ್ ಮತ್ತು ಸಿ.ಪ್ರತ್ಯೂಷಾ ಅವರನ್ನು ಕೈಬಿಡಲಾಗಿದೆ. ಏಕೈಕ ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಮಿಥಾಲಿ ರಾಜ್ ತಂಡವನ್ನು ಮುನ್ನಡೆಸಲಿದ್ದು ಮೂರು ಟಿ20 ಪಂದ್ಯಗಳಲ್ಲಿ ತಂಡದ ನಾಯಕತ್ವವನ್ನು ಹರ್ಮನ್‌ಪ್ರೀತ್ ಕೌರ್ ವಹಿಸಲಿದ್ದಾರೆ.

ತಂಡಗಳು: ಟೆಸ್ಟ್ ಮತ್ತು ಏಕದಿನ: ಮಿಥಾಲಿ ರಾಜ್ (ನಾಯಕಿ), ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಪೂನಂ ರಾವತ್, ಪ್ರಿಯಾ ಪೂನಿಯಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್‌, ಶಫಾಲಿ ವರ್ಮಾ, ಸ್ನೇಹಾ ರಾಣಾ, ತಾನಿಯಾ ಭಾಟಿಯಾ, (ವಿಕೆಟ್ ಕೀಪರ್‌), ಇಂದ್ರಾಣಿ ರಾಯ್ (ವಿಕೆಟ್ ಕೀಪರ್‌), ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಕಾರ್, ಅರುಂಧತಿ ರೆಡ್ಡಿ, ಪೂನಂ ಯಾದವ್‌, ಏಕ್ತಾ ಬಿಷ್ಠ್‌, ರಾಧಾ ಯಾದವ್.

ADVERTISEMENT

ಟಿ20: ಹರ್ಮನ್‌ಪ್ರೀತ್ ಕೌರ್‌ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್‌, ಶಫಾಲಿ ವರ್ಮಾ, ರಿಚಾ ಘೋಷ್‌, ಹರ್ಲೀನ್ ಡಿಯೋಲ್‌, ಸ್ನೇಹಾ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್‌), ಇಂದ್ರಾಣಿ ರಾಯ್ (ವಿಕೆಟ್ ಕೀಪರ್‌), ಶಿಖಾ ಪಾಂಡೆ, ಪೂಜಾ ವಸ್ತ್ರಕಾರ್‌, ಅರುಂಧತಿ ರೆಡ್ಡಿ, ಪೂನಂ ಯಾದವ್‌, ಏಕ್ತಾ ಬಿಷ್ಠ್‌, ರಾಧಾ ಯಾದವ್‌, ಸಿಮ್ರನ್ ದಿಲ್ ಬಹದ್ದೂರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.