ADVERTISEMENT

ಮಹಿಳಾ ಕ್ರಿಕೆಟ್‌: ಕರ್ನಾಟಕ ಜಯಭೇರಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:36 IST
Last Updated 26 ಫೆಬ್ರುವರಿ 2020, 19:36 IST

ರಾಜಕೋಟ್‌: ಕರ್ನಾಟಕ ತಂಡ, 19 ವರ್ಷದೊಳಗಿನವರ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು 178 ರನ್‌ಗಳಿಂದ ಸೋಲಿಸಿತು. ರೈಲ್ವೆ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕದ ಎಂ.ಪೂಜಾ ಕುಮಾರಿ (9ಕ್ಕೆ4) ಬೌಲಿಂಗ್‌ನಲ್ಲಿ ಮಿಂಚಿದರು.

ಗೆಲುವಿಗಾಗಿ ಕರ್ನಾಟಕ ನಾಲ್ಕು ಪಾಯಿಂಟ್ಸ್‌ ಪಡೆಯಿತು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 50 ಓವರುಗಳಲ್ಲಿ 9 ವಿಕೆಟ್‌ಗೆ 219 (ರೋಷನಿ ಕಿರಣ್‌ 39, ಕೃಷಿಕಾ ರೆಡ್ಡಿ 46, ಅದಿತಿ ರಾಜೇಶ್‌ 45; ಎಸ್‌.ಜೇತ್ವಾ 30ಕ್ಕೆ2, ಎಂ.ಮೋಧ್ವಾಡಿಯಾ 35ಕ್ಕೆ2, ಜೆ.ಶ್ರುತಿ 43ಕ್ಕೆ2); ಸೌರಾಷ್ಟ್ರ: 24 ಓವರುಗಳಲ್ಲಿ 41 (ಪೂಜಾ ಕುಮಾರಿ 9ಕ್ಕೆ4, ಅನಘಾ 9ಕ್ಕೆ2).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.