
ಆರ್‌ಸಿಬಿ ತಂಡದ ಸಹ ಆಟಗಾರ್ತಿಯರು
ಮುಂಬೈ: ಮುಂದಿನ ಮಹಿಳಾ ಪ್ರೀಮಿಯರ್ ಲೀಗ್‌ನ ವೇಳಾಪಟ್ಟಿ ಮತ್ತು ಪಂದ್ಯಗಳ ತಾಣಗಳನ್ನು ಇದೇ 26ರಂದು ಅಂತಿಮಗೊಳಿಸುವ ನಿರೀಕ್ಷೆಯಿದೆ.
27ರಂದು ನವದೆಹಲಿಯಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ದಿನ ಬಿಸಿಸಿಐ ಆಡಳಿತ ಸಮಿತಿ ಸಭೆ ಸೇರಿ ವೇಳಾಪಟ್ಟಿ ಮತ್ತು ತಾಣಗಳನ್ನು ಅಂತಿಮಗೊಳಿಸಲಿದೆ.
ಮುಂದಿನ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಪುರುಷರ ಟಿ20 ವಿಶ್ವಕಪ್ ನಡೆಯಲಿದೆ. ಅದರ ನಂತರ ಎರಡು ತಿಂಗಳು ಐಪಿಎಲ್ ಟೂರ್ನಿ ನಡೆಯಲಿರುವುದರಿಂದ ಈ ಬಾರಿ ಡಬ್ಲ್ಯುಪಿಎಲ್ ಎಂದಿಗಿಂತ ಮುಂಚಿತವಾಗಿ ನಡೆಸುವ ನಿರೀಕ್ಷೆಯಿದೆ.
2026ರ ಡಬ್ಲ್ಯುಪಿಎಲ್ ಟೂರ್ನಿಯನ್ನು ಜನವರಿ 7ರಿಂದ ಫೆಬ್ರುವರಿ 3ರವರೆಗೆ ನವಿ ಮುಂಬೈ ಮತ್ತು ವಡೋದರಾದ ಕ್ರೀಡಾಂಗಣಗಳಲ್ಲಿ ಆಯೋಜಿಸುವ ನಿರೀಕ್ಷೆಯಿದೆ ಎಂದು ‘ಕ್ರಿಕ್‌ಬಜ್’ ವರದಿ ಮಾಡಿದೆ.
ಯುಪಿ ವಾರಿಯರ್ಸ್ ತಂಡವು ₹ 14.5 ಕೋಟಿಗಳ ಅತಿ ಹೆಚ್ಚು ಮೊತ್ತ ದೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದೆ. ಗುಜರಾತ್ ಜೈಂಟ್ಸ್ ₹ 9 ಕೋಟಿ ಮೊತ್ತದೊಂದಿಗೆ ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ₹ 6.15 ಕೋಟಿ ಮೊತ್ತ ಹೊಂದಿದ್ದರೆ, ಮುಂಬೈ ಇಂಡಿಯನ್ಸ್ ₹ 5.75 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್ ₹5.7 ಕೋಟಿ ಉಳಿಸಿಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.