ADVERTISEMENT

ಬಾಂಗ್ಲಾ ಹುಲಿಗಳ ಕಾಡಿದ ಮುಜೀಬ್; ಅಫ್ಗಾನ್‌ಗೆ 263 ರನ್‌ ಗುರಿ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 13:56 IST
Last Updated 24 ಜೂನ್ 2019, 13:56 IST
ವಿಕೆಟ್‌ ಪಡೆದ ಸಂಭ್ರಮದಲ್ಲಿ ಮುಜೀಬ್‌ ಉರ್‌ ರೆಹಮಾನ್‌
ವಿಕೆಟ್‌ ಪಡೆದ ಸಂಭ್ರಮದಲ್ಲಿ ಮುಜೀಬ್‌ ಉರ್‌ ರೆಹಮಾನ್‌    

ಸೌತಾಂಪ್ಟನ್:ಅಫ್ಗಾನಿಸ್ತಾನ ನೀಡಿದ ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಉತ್ತಮ ರನ್‌ ಗಳಿಯತ್ತ ಮುನ್ನಡೆದಿದ್ದ ಬಾಂಗ್ಲಾ ತಂಡಕ್ಕೆ ಮುಜೀಬ್‌ ತಡೆ ಗೋಡೆಯಾದರು. ಪ್ರಮುಖ ಮೂರು ವಿಕೆಟ್‌ ಕಬಳಿಸುವ ಮೂಲಕ ಬೃಹತ್‌ಮೊತ್ತಕ್ಕೆ ಕಡಿವಾಣ ಹಾಕಿದರು.

ಬಾಂಗ್ಲಾದೇಶ ನಿಗದಿತ 50ಓವರ್‌ಗಳಲ್ಲಿ 7ವಿಕೆಟ್‌ ನಷ್ಟಕ್ಕೆ 262ರನ್‌ ಗಳಿಸಿತು. ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿಅರ್ಧ ಶತಕ ದಾಖಲಿಸಿದಮುಷ್ಫಿಕರ್‌ ರಹೀಮ್‌ (83; 4 ಬೌಂಡರಿ, 1 ಸಿಕ್ಸರ್‌) ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.ಕೊನೆಯ ಓವರ್‌ಗಳಲ್ಲಿಮೊಸಾಡೆಕ್‌ಹೊಸೇನ್‌ ಬಿರುಸಿನ ಆಟ ಪ್ರದರ್ಶಿಸಿ 24ಎಸೆತಗಳಲ್ಲಿ 35ರನ್‌ ಕಲೆಹಾಕಿದರು.

ಕ್ಷಣಕ್ಷಣದ ಸ್ಕೋರ್‌:https://bit.ly/2NaEfiP

ADVERTISEMENT

ತಂಡ 250 ರನ್‌ ದಾಟಿದ ನಂತರ, 48ನೇ ಓವರ್‌ನಲ್ಲಿ ದೌಲತ್‌ಝದ್ರಾನ್‌ ಎಸೆತದಲ್ಲಿಮುಷ್ಫಿಕರ್‌ ಕ್ಯಾಚ್‌ ನೀಡಿದರು.

ತಾಳ್ಮೆಯ ಆಟದೊಂದಿಗೆಅರ್ಧ ಶತಕ ಗಳಿಸಿದ್ದಶಕೀಬ್‌ ಅಲ್‌ ಹಸನ್‌(51) ಮುಜೀಬ್‌ ಎಸೆತದಲ್ಲಿ ಎಲ್‌ಬಿಡಬ್ಯುಗೆ ಬಲಿಯಾದರು. ಅಲ್ಲಿಗೆ ಮುಷ್ಫಿಕರ್‌ ರಹೀಮ್‌ ಮತ್ತು ಶಕೀಬ್‌ ಜತೆಯಾಟಕೊನೆಯಾಯಿತು. ಸೌಮ್ಯ ಸರ್ಕಾರ್‌ ಲಯ ಕಂಡುಕೊಳ್ಳುವ ಮುನ್ನವೇಮುಜೀಬ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

ಉತ್ತಮ ಆಟವಾಡುತ್ತಿದ್ದ ಆರಂಭಿಕ ಲಿಟನ್‌ ದಾಸ್‌(16) ನಾಲ್ಕನೇ ಓವರ್‌ನಲ್ಲಿಮುಜೀಬ್‌ ಉರ್‌ ರೆಹಮಾನ್‌ ಎಸೆತದಲ್ಲಿ ಕ್ಯಾಚ್‌ ನೀಡಿ ಆಟ ಮುಗಿಸಿದರು. 18 ವರ್ಷ ವಯಸ್ಸಿನ ಮುಜೀಬ್‌ ಭಾರತದ ಎದುರು 10 ಓವರ್‌ಗಳಲ್ಲಿ ಕೇವಲ 26 ರನ್‌ ನೀಡಿ 1 ವಿಕೆಟ್‌ ಪಡೆದಿದ್ದರು. ಈಗ ಬಾಂಗ್ಲಾದೇಶ ತಂಡದ ಮೂರು ವಿಕೆಟ್‌ ಗಳಿಸಿ ಉತ್ತಮ ಪ್ರದರ್ಶನ ತೋರಿದ್ದಾರೆ.

36 ರನ್‌ ಗಳಿಸಿದ್ದ ತಮೀಮ್‌ ಇಕ್ಬಾಲ್‌, ನಬಿ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಗುಲ್ಬದೀನ್‌ ನೈಬ್ ಎಸೆತದಲ್ಲಿಮಹಮುದುಲ್ಲಾ(27) ಕ್ಯಾಚ್‌ ನೀಡಿ ಹೊರನಡೆದರು. ಅಫ್ಗಾನ್‌ ಪರ, ಮುಜೀಬ್‌ 3 ವಿಕೆಟ್‌, ನೈಬ್‌ 2 ಹಾಗೂ ನಬಿಮತ್ತುದೌಲತ್‌ ತಲಾ 1 ವಿಕೆಟ್‌ ಪಡೆದರು.

ಇಲ್ಲಿನ ಹ್ಯಾಂಪ್‌ಶೈರ್‌ ಬೌಲ್‌ ಕ್ರೀಡಾಂಗಣದಲ್ಲಿ ಶನಿವಾರ ಭಾರತದ ವಿರುದ್ಧ ತೀವ್ರ ಪೈಪೋಟಿ ನಡೆಸಿದ್ದ ಅಫ್ಗಾನಿಸ್ತಾನ ತಂಡ, ಸೋಮವಾರ ಬಾಂಗ್ಲಾದೇಶದ ಎದುರು ಇದೇ ಮೈದಾನದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಮಳೆಯಿಂದಾಗಿ ಹತ್ತು ನಿಮಿಷ ತಡವಾಗಿ ಪಂದ್ಯ ಆರಂಭಿಸಲಾಯಿತು.

ಶಿಸ್ತಿನ ಬೌಲಿಂಗ್‌ ಮೂಲಕ ಟೀಂ ಇಂಡಿಯಾ ಆಟಗಾರರನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ್ದ ಅಫ್ಗಾನ್‌ ಪಡೆ, ಸೆಮಿಫೈನಲ್‌ ಪ್ರವೇಶಿಸುವ ಕನಸಿನೊಂದಿಗೆ ಕಣದಲ್ಲಿರುವ ಬಾಂಗ್ಲಾ ಹುಲಿಗಳಿಗೆ ತೀವ್ರ ಸವಾಲು ಒಡ್ಡಿದೆ.

ಟಾಸ್‌ ಗೆದ್ದ ಅಫ್ಗಾನ್‌ ನಾಯಕ ಗುಲ್ಬದೀನ್‌ ನೈಬ್‌, ‘ಪಿಚ್‌ ಸ್ಥಿತಿ ಬೌಲಿಂಗ್‌ ಮಾಡಲು ಪೂರಕವಾಗಿದೆ ಹಾಗೂ ನಾವು ಈಗಾಗಲೇ ಇಲ್ಲಿ ಪಂದ್ಯ ಎದುರಿಸಿದ್ದೇವೆ. ಭಾರತದ ಎದುರಿನ ಎರಡನೇ ಇನಿಂಗ್ಸ್‌ನಲ್ಲಿ ಪಿಚ್‌ ಪರವಾಗಿ ವರ್ತಿಸಿತು, ಈಗಲೂ ಅದೇ ರೀತಿ ಕಾಣುತ್ತಿದೆ. ಭಾರತವನ್ನು ಮಣಿಸಲು ನಮಗೆ ಸೂಕ್ತ ಅವಕಾಶ ದೊರೆತಿತ್ತು, ಇವತ್ತು ಮತ್ತಷ್ಟು ಉತ್ತಮವಾಗಿ ಆಡುವ ವಿಶ್ವಾಸವಿದೆ‘ ಎಂದರು.

ಬಾಂಗ್ಲಾ ಪರ ಸೀಮರ್‌ ರುಬೆಲ್‌ ಸ್ಥಾನಕ್ಕೆ ಸೈಫುದ್ದೀನ್‌ ಮರಳುತ್ತಿದ್ದು, ಸಬ್ಬೀರ್‌ ಬದಲು ಮೊಸಾದೆಕ್‌ ಕಣಕ್ಕಿಳಿದಿದ್ದಾರೆ. ಅಫ್ಗಾನ್‌ ಪರ, ಹಝರತುಲ್ಲಾ ಝಝೈ ಮತ್ತು ಅಫ್ತಾಬ್‌ ಆಲಮ್‌ ಬದಲು ದೌಲತ್‌ಝದ್ರಾನ್‌ ಮತ್ತು ಸಮಿವುಲ್ಲಾ ಶಿನ್ವಾರಿ ಆಡುತ್ತಿದ್ದಾರೆ.

ಶುಕ್ರವಾರ ಇಂಗ್ಲೆಂಡ್ ತಂಡವು ಶ್ರೀಲಂಕಾದ ಎದುರು ಸೋತಿರುವುದರಿಂದ ಬಾಂಗ್ಗಾದೇಶಕ್ಕೆ ಸ್ಪರ್ಧೆಯಲ್ಲಿ ಉಳಿಯುವ ಅವಕಾಶ ಹೆಚ್ಚಿದೆ. ಆರು ಪಂದ್ಯಗಳನ್ನು ಆಡಿರುವ ಬಾಂಗ್ಲಾ ತಂಡವು ಎರಡರಲ್ಲಿ ಗೆದ್ದು ಮೂರರಲ್ಲಿ ಸೋತಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದರಿಂದಾಗಿ ಐದು ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಲಂಕಾ ತಂಡವು ಆರು ಪಾಯಿಂಟ್ಸ್‌ನೊಂದಿಗೆ ಐದನೇ ಸ್ಥಾನದಲ್ಲಿದೆ. ಶಕೀಬ್ ಅಲ್ ಹಸನ್, ಮುಷ್ಫಿಕ್ ಉರ್ ರೆಹಮಾನ್ ಅವರು ಭರ್ಜರಿ ಫಾರ್ಮ್‌ನಲ್ಲಿರುವುದರಿಂದ ಮುಂದಿನ ಮೂರು ಪಂದ್ಯಗಳಲ್ಲಿಯೂ ಗೆದ್ದು ಮುನ್ನಡೆ ಸಾಧಿಸುವ ಉತ್ಸಾಹದಲ್ಲಿ ತಂಡವಿದೆ.

ಸ್ಕೋರ್‌ ವಿವರ: ಬಾಂಗ್ಲಾದೇಶ 7ಕ್ಕೆ 262 (50 ಓವರ್‌ಗಳಲ್ಲಿ)

ಲಿಟನ್ ದಾಸ್ ಸಿ ಹಶ್ಮತ್ ಉಲ್ಲಾ ಶಾಹಿದಿ ಬಿ ಮುಜೀಬ್ ಉರ್ ರಹಿಮಾನ್ 16

ತಮೀಮ್ ಇಕ್ಬಾಲ್ ಬಿ ಮೊಹಮ್ಮದ್ ನಬಿ 36

ಶಕೀಬ್ ಅಲ್ ಹಸನ್ ಎಲ್‌ಬಿಡಬ್ಲ್ಯು ಮುಜೀಬ್ ಉರ್ ರಹಿಮಾನ್ 51

ಮುಷ್ಫಿಕ್ ಉರ್ ರಹೀಂ ಸಿ ಮೊಹಮ್ಮದ್ ನಬಿ ಬಿ ದೌಲತ್ ಜದ್ರಾನ್ 83

ಸೌಮ್ಯಾ ಸರ್ಕಾರ್ ಎಲ್‌ಬಿಡಬ್ಲ್ಯು ಮುಜೀಬ್ ಉರ್ ರಹಿಮಾನ್ 03

ಮೊಹಮ್ಮದುಲ್ಲಾ ಸಿ ಮೊಹಮ್ಮದ್ ನಬಿ ಬಿ ಗುಲ್ಬದಿನ್ ನೈಬ್ 27

ಮೊಸಾಡೆಕ್ ಹೊಸೇನ್ ಬಿ ಗುಲ್ಬದಿನ್ ನೈಬ್ 35

ಮೊಹಮ್ಮದ್ ಸೈಫುದ್ದೀನ್ ಔಟಾಗದೆ 02

ಇತರೆ (ವೈಡ್‌ 9) 09

ವಿಕೆಟ್ ಪತನ

1-23 (ಲಿಟನ್ ದಾಸ್, 4.2), 2-82 (ತಮೀಮ್ ಇಕ್ಬಾಲ್, 16.6), 3-143 (ಶಕೀಬ್ ಅಲ್ ಹಸನ್, 29.2), 4-151 (ಸೌಮ್ಯಾ ಸರ್ಕಾರ್, 31.6), 5-207 (ಮೊಹಮದುಲ್ಲಾ, 42.6), 6-251 (ಮುಷ್ಫಿಕುರ್ ರಹೀಂ, 48.3), 7-262 (ಮೊಸಾಡೆಕ್ ಹೊಸೇನ್, 49.6)

ಬೌಲಿಂಗ್

ಮುಜೀಬ್ ಉರ್ ರಹಿಮಾನ್ 10–0–39–3, ದೌಲತ್ ಜದ್ರಾನ್ 9–0–64–1, ಮೊಹಮ್ಮದ್ ನಬಿ 10–0–44–1, ಗುಲ್ಬದಿನ್ ನೈಬ್‌ 10–1–56–2, ರಶೀದ್ ಖಾನ್ 10–0–52–0, ರಹಮತ್ ಶಾ 1–0–7–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.