ಲೀಡ್ಸ್:ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದಅಫ್ಗಾನಿಸ್ತಾನ ಆರಂಭಿಕ ಆಘಾತ ಅನುಭವಿಸಿತು. ತಂಡ 27 ರನ್ ಗಳಿಸುವಷ್ಟರಲ್ಲಿ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತು. ಸೆಮಿಫೈನಲ್ ಪ್ರವೇಶ ಜೀವಂತವಾಗಿರಿಸಲುಸರ್ಫರಾಜ್ ಬಳಗ ಈ ಪಂದ್ಯವನ್ನೂ ಗೆಲ್ಲಬೇಕಾದ ಅನಿವಾರ್ಯತೆಯಲ್ಲಿದೆ. ಪಾಕ್ ಬೌಲರ್‌ಗಳು ಅಫ್ಗಾನ್ ಪಡೆಯನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಲು ಸಫಲರಾದರು. ಗೆಲುವಿಗೆ ಅಫ್ಗಾನ್ 228ರನ್ ಗುರಿ ನೀಡಿದೆ.
ಅಫ್ಗಾನ್ ನಿಗದಿತ 50ಓವರ್‌ಗಳಲ್ಲಿ 9ವಿಕೆಟ್ ನಷ್ಟಕ್ಕೆ 227ರನ್ ಗಳಿಸಿತು. ಶಾಹಿನ್ ಅಫ್ರಿದಿ ಮಾರಕ ಬೌಲಿಂಗ್ ನಡೆಸಿ ಅಫ್ಗಾನ್ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸಿದರು. 10 ಓವರ್‌ಗಳಲ್ಲಿ 47 ರನ್ ನೀಡಿ 4 ವಿಕೆಟ್ ಪಡೆದರು.
ಕ್ಷಣಕ್ಷಣದ ಸ್ಕೋರ್:https://bit.ly/2Jc8qAT
ಅಲ್ಪ ಮೊತ್ತಕ್ಕೆ ಕುಸಿಯುವ ತಂಡಕ್ಕೆಭರ್ಜರಿ ಪ್ರದರ್ಶನ ನೀಡುವ ಮೂಲಕಅಸ್ಗರ್ ಅಫ್ಗರ್(42) ಆಸರೆಯಾದರು. ಅಸ್ಗರ್‌ಮತ್ತು ಜತೆಯಾಟದ ಸಾಥ್ ನೀಡಿದಇಕ್ರಾಂ ಅಲಿಖಿಲ್(24) ಹೋರಾಟಕ್ಕೆ ಪಾಕಿಸ್ತಾನ ಬೌಲರ್‌ಗಳು ಕಡಿವಾಣ ಹಾಕಿದರು. ನಜೀಬುಲ್ಲಾ ಜದ್ರಾನ್(42) ತಾಳ್ಮೆಯ ಪ್ರದರ್ಶನದಿಂದಾಗಿ ತಂಡವು 200 ರನ್ ಗಡಿದಾಟಲು ಸಹಕಾರಿಯಾಯಿತು.
ಹೆಡಿಂಗ್ಲೆ ಮೈದಾನದಲ್ಲಿ ಶನಿವಾರ ನಡೆಯುತ್ತಿರುವ ಅಫ್ಗಾನಿಸ್ತಾನ–ಪಾಕಿಸ್ತಾನ ತಂಡಗಳ ನಡುವಣ ಈ ಹೋರಾಟ ಪಾಕಿಸ್ತಾನದ ಪಾಲಿಗೆ ಮಹತ್ವದ್ದಾಗಿದೆ. ಸರ್ಫರಾಜ್ ಪಡೆಯ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಜೀವಂತವಾಗಿರಲಿದೆ.
ತಾಳ್ಮೆಯ ಆಟ ಪ್ರದರ್ಶಿಸುತ್ತಿದ್ದ ರಹಮತ್ ಶಾ(35) ಇಮಾದ್ ವಾಸಿಂ ಎಸೆತದಲ್ಲಿ ಕ್ಯಾಚ್ ನೀಡಿದರು.ಮೊಹಮ್ಮದ್ ನಬಿ (16) ವಹಾಬ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಆರಂಭದಲ್ಲಿಉತ್ತಮ ಹೊಡೆತಗಳ ಮೂಲಕ ನಿರೀಕ್ಷೆ ಮೂಡಿಸಿದ ಗುಲ್ಬದೀನ್ ನೈಬ್ ಬಹುಬೇಗ ಹೊರನಡೆದರು. ಶಾಹಿನ್ ಅಫ್ರಿದಿ ಅವರ ಮೊದಲ ಓವರ್‌ನ ಮೂರು ಎಸೆತಗಳಲ್ಲಿ 2 ಬೌಂಡರಿ ಮತ್ತು ಎರಡು ರನ್ ಗಳಿಸಿದ್ದ ನಾಯಕ ನೈಬ್(15), ನಾಲ್ಕನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಶಾಹಿನ್ ಐದನೇ ಎಸೆತದಲ್ಲಿ ಆಗ ತಾನೇ ಕ್ರೀಸ್ ಪ್ರವೇಶಿಸಿದ್ದಹಸಮತ್‌ಉಲ್ಲಾ ಶಾಹಿದಿ ಕ್ಯಾಚ್ ನೀಡಿ ಮರಳಿದರು.
ಶಾಹಿನ್ ಅಫ್ರಿದಿ 4 ವಿಕೆಟ್, ಇಮಾದ್ ವಾಸಿಂ ಮತ್ತು ವಹಾಬ್ ರಿಯಾಜ್ ತಲಾ 2 ಹಾಗೂ ಶಾದಬ್ ಖಾನ್ 1 ವಿಕೆಟ್ ಪಡೆದರು.
ವಿಶ್ವಕಪ್ ಟೂರ್ನಿಯ ಪಂದ್ಯಗಳಲ್ಲಿ ಅಫ್ಗಾನ್, ವೇಗದ ಬೌಲರ್‌ಗಳಿಗೆ ಅತಿ ಹೆಚ್ಚು,47 ವಿಕೆಟ್‌ಗಳನ್ನು ಒಪ್ಪಿಸಿದ್ದಾರೆ.
ಅಫ್ಗಾನಿಸ್ತಾನದ ಸ್ಪಿನ್ನರ್‌ಗಳು ಮೊದಲ ಐದು ಪಂದ್ಯಗಳಲ್ಲಿ ಕೇವಲ 8 ವಿಕೆಟ್ ಗಳಿಸಿದ್ದರು. ಆದರೆ, ನಂತರದ ಎರಡು ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ.
ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಅಫ್ಗಾನಿಸ್ತಾನ ಚೊಚ್ಚಲ ಗೆಲುವಿನ ನಿರೀಕ್ಷೆಯಲ್ಲಿದೆ. ಪಾಕಿಸ್ತಾನವು ಏಕದಿನ ಮಾದರಿಯಲ್ಲಿ ಅಫ್ಗಾನಿಸ್ತಾನ ವಿರುದ್ಧ ಆಡಿರುವ ಮೂರು ಪಂದ್ಯಗಳಲ್ಲೂ ಗೆದ್ದಿದೆ. ವಿಶ್ವಕಪ್‌ನಲ್ಲಿ ಉಭಯ ತಂಡಗಳು ಮೊದಲ ಸಲ ಮುಖಾಮುಖಿಯಾಗುತ್ತಿವೆ.
ನ್ಯೂಜಿಲೆಂಡ್ ಎದುರಿನ ಹಣಾಹಣಿಯಲ್ಲಿ ಬಾಬರ್ ಅಜಂ ಶತಕ ಸಿಡಿಸಿ ಮಿಂಚಿದ್ದರು. ಶಾಹೀನ್ ಶಾ ಅಫ್ರಿದಿ ಮೂರು ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು.
ತಂಡಗಳು ಇಂತಿವೆ:ಪಾಕಿಸ್ತಾನ: ಸರ್ಫರಾಜ್ ಅಹಮದ್ (ನಾಯಕ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಂ, ಹ್ಯಾರಿಸ್ ಸೋಹೆಲ್, ಹಸನ್ ಅಲಿ, ಶಾದಬ್ ಖಾನ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸನೇನ್, ಶಾಹೀನ್ ಶಾ ಅಫ್ರಿದಿ, ವಹಾಬ್ ರಿಯಾಜ್, ಮೊಹಮ್ಮದ್ ಆಮೀರ್, ಶೋಯಬ್ ಮಲಿಕ್, ಇಮಾದ್ ವಾಸೀಂ ಮತ್ತು ಆಸಿಫ್ ಅಲಿ.
ಅಫ್ಗಾನಿಸ್ತಾನ:ಗುಲ್ಬದೀನ್ ನೈಬ್ (ನಾಯಕ), ಸೈಯದ್ ಅಹಮದ್ ಶಿರ್ಜಾದ್, ಹಜರತ್‌ಉಲ್ಲಾ ಜಜಾಯ್, ಅಸ್ಗರ್ ಅಫ್ಗಾನ್, ರಶೀದ್ ಖಾನ್, ಮೊಹಮ್ಮದ್ ನಬಿ, ಮುಜೀಬ್ ಉರ್ ರಹಮಾನ್, ದವಲತ್ ಜದ್ರಾನ್, ನಜೀಬುಲ್ಲಾ ಜದ್ರಾನ್, ಹಮೀದ್ ಹಸನ್, ಹಸಮತ್‌ಉಲ್ಲಾ ಶಾಹಿದಿ, ಸಮೀವುಲ್ಲಾ ಶಿನ್ವಾರಿ, ರಹಮತ್ ಶಾ, ನೂರ್ ಅಲಿ ಜದ್ರಾನ್ ಮತ್ತು ಇಕ್ರಾಂ ಅಲಿಖಿಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.