ADVERTISEMENT

ಕೌಶಲ ಉತ್ತಮಪಡಿಸಿಕೊಂಡ ಆತ್ಮವಿಶ್ವಾಸದಲ್ಲಿ ಪೂಜಾ

ಪಿಟಿಐ
Published 11 ಫೆಬ್ರುವರಿ 2022, 15:29 IST
Last Updated 11 ಫೆಬ್ರುವರಿ 2022, 15:29 IST
ಪೂಜಾ ವಸ್ತ್ರಕಾರ್ 
ಪೂಜಾ ವಸ್ತ್ರಕಾರ್    

ಕ್ವಿನ್ಸ್‌ಟೌನ್: ಹೋದ ಬಾರಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ಚೆನ್ನಾಗಿ ಆಡಿರಲಿಲ್ಲ. ಆದ್ದರಿಂದ ಹೊಸ ಚೆಂಡಿನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುವ ತಂತ್ರಗಳನ್ನು ಪರಿಶ್ರಮದಿಂದ ಅಭ್ಯಾಸ ಮಾಡಿದ್ಧೇನೆ. ಇಲ್ಲಿ ಅದರ ಫಲ ಸಿಗುವ ನಿರೀಕ್ಷೆ ಇದೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಪೂಜಾ ವಸ್ತ್ರಕರ್ ಹೇಳಿದ್ದಾರೆ.

ಶನಿವಾರ ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಗೆಲುವು ಸಾಧಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

‘ತಂಡದಲ್ಲಿರುವ ಸೀನಿಯರ್ ಆಟಗಾರರು ಮತ್ತು ಕೋಚ್‌ ನೀಡಿದ ಸಲಹೆಗಳು ಬಹಳ ನೆರವಾದವು. ಸಿಂಗಲ್ ವಿಕೆಟ್ ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದೆ‘’ ಎಂದು ಪೂಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಈ ಸರಣಿಯಲ್ಲಿ ಭಾರತ ಮತ್ತು ಕಿವೀಸ್ ತಂಡಗಳು ಐದು ಏಕದಿನ ಪಂದ್ಯಗಳನ್ನು ಆಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.