ADVERTISEMENT

WPL Auction| 73 ಸ್ಥಾನಗಳಿಗೆ 277 ಮಂದಿ ಪೈಪೋಟಿ: ಕಣದಲ್ಲಿದ್ದಾರೆ ಪ್ರಮುಖರು

ಪಿಟಿಐ
Published 21 ನವೆಂಬರ್ 2025, 9:24 IST
Last Updated 21 ನವೆಂಬರ್ 2025, 9:24 IST
   

ನವದೆಹಲಿ: ಮಹಿಳಾ ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದ ದೀಪ್ತಿ ಶರ್ಮಾ, ರೇಣುಕಾ ಠಾಕೂರ್‌ ಸೇರಿದಂತೆ 277 ಆಟಗಾರ್ತಿಯರು ಮಹಿಳಾ ಪ್ರೀಮಿಯರ್‌ ಲೀಗ್‌(ಡಬ್ಲ್ಯೂಪಿಎಲ್‌) ಟೂರ್ನಿಯ ಮುಂದಿನ ಆವೃತ್ತಿಯ ಹರಾಜಿನ ಕಣದಲ್ಲಿದ್ದಾರೆ.

ಡಬ್ಲ್ಯೂಪಿಎಲ್‌ನಲ್ಲಿ ಮುಂದಿನ ಆವೃತ್ತಿಗಾಗಿ ಎಲ್ಲ ತಂಡಗಳು ಸೇರಿ 73 ಸ್ಥಾನಗಳು ಖಾಲಿ ಇವೆ. ಅದಕ್ಕಾಗಿ ವಿದೇಶಿ ಆಟಗಾರ್ತಿಯರು ಸೇರಿದಂತೆ ಒಟ್ಟು 277 ಮಂದಿ ನೋಂದಾಯಿಸಿಕೊಂಡಿದ್ದು, ನ.27ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.

ಹರಾಜು ಕಣದಲ್ಲಿ 194 ಭಾರತೀಯ ಆಟಗಾರ್ತಿಯರಿದ್ದಾರೆ. ಇದರಲ್ಲಿ 52 ಮಂದಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. 142 ಅನ್‌ಕ್ಯಾಪ್ಡ್‌ ಆಟಗಾರ್ತಿಯರಿದ್ದಾರೆ. 83 ವಿದೇಶಿ ಆಟಗಾರ್ತಿಯರು ಹರಾಜಿನಲ್ಲಿ ಭಾಗವಹಿಸಲಿದ್ದು, ಇದರಲ್ಲಿ 66 ಮಂದಿ ಅಂತರರಾಷ್ಟ್ರೀಯ ಆಟಗಾರ್ತಿಯರಿದ್ದಾರೆ.

ADVERTISEMENT

277 ಆಟಗಾರ್ತಿಯರಲ್ಲಿ 19 ಮಂದಿ ಅತಿ ಹೆಚ್ಚು ಮೂಲಬೆಲೆ(₹50 ಲಕ್ಷ) ಹೊಂದಿದ್ದಾರೆ. 11 ಮಂದಿ ₹40 ಲಕ್ಷ ಹಾಗೂ 88 ಆಟಗಾರ್ತಿಯರು ₹30 ಲಕ್ಷ ಮೂಲಬೆಲೆ ಹೊಂದಿದ್ದಾರೆ.

ಭಾರತ ತಂಡದ ಪ್ರಮುಖ ಆಟಗಾರ್ತಿಯರಾದ ದೀಪ್ತಿ ಶರ್ಮಾ, ಪ್ರತೀಕ್ಷಾ ರಾವಲ್‌, ಹರ್ಲೀನ್ ಡಿಯೋಲ್, ಪೂಜಾ ವಸ್ತ್ರಾಕರ್, ರೇಣುಕಾ ಠಾಕೂರ್‌, ಕಾಂತಿ ಗೌಡ ಅವರು ₹50 ಲಕ್ಷ ಮೂಲಬೆಲೆ ಹೊಂದಿದ್ದಾರೆ.

ಸೋಫಿ ಡಿವೈನ್‌, ಅಮೇಲಿಯಾ ಕೇರ್‌, ಅಲಿಸಾ ಹೀಲಿ, ಮೆಗ್‌ ಲ್ಯಾನಿಂಗ್ ಅವರಂತಹ ಸ್ಟಾರ್‌ ಆಟಗಾರ್ತಿಯರು ಈ ಬಾರಿಯ ಹರಾಜಿನ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಡಬ್ಲ್ಯೂಪಿಎಲ್‌ನಲ್ಲಿ ಒಟ್ಟು 5 ತಂಡಗಳಿದ್ದು, ಒಂದು ತಂಡದಲ್ಲಿ ಗರಿಷ್ಠ 18 ಆಟಗಾರ್ತಿಯರಿಗೆ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.