ADVERTISEMENT

PHOTOS | WPL: ಈ ಸಲವೂ ಕಪ್ ನಮ್ದು; ಆರ್‌ಸಿಬಿ ವನಿತೆಯರ ಮುಡಿಗೆ ಕಿರೀಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2026, 3:08 IST
Last Updated 6 ಫೆಬ್ರುವರಿ 2026, 3:08 IST
<div class="paragraphs"><p>ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ&nbsp;ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.</p></div>

ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.

   

(ಪಿಟಿಐ ಚಿತ್ರ)

ಆರ್‌ಸಿಬಿ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿತು.

ADVERTISEMENT

204 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿ, ನಾಯಕಿ ಸ್ಮೃತಿ ಮಂದಾನ (87 ರನ್) ಹಾಗೂ ಜಾರ್ಜಿಯಾ ವೋಲ್ (79 ರನ್) ಅಬ್ಬರದ ನೆರವಿನಿಂದ ಇನ್ನು ಎರಡು ಎಸೆತಗಳು ಬಾಕಿ ಇರುವಂತೆಯೇ 19.4 ಓವರ್‌ಗಳಲ್ಲಿ ಗುರಿ ತಲುಪಿತು.

ಗೆಳತಿಯರ ಸ್ಪರ್ಧೆಯಲ್ಲಿ ಮತ್ತೆ ಗೆದ್ದ ಮಂದಾನ

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ ನಾಲ್ಕನೇ ಸಲವೂ ಪ್ರಶಸ್ತಿ ಸುತ್ತಿನಲ್ಲಿ ನಿರಾಸೆ ಅನುಭವಿಸಿತು

ಒಟ್ಟಾರೆ ಆರ್‌ಸಿಬಿ ಫ್ರ್ಯಾಂಚೈಸಿಯು ಸತತ ಮೂರು ವರ್ಷಗಳಿಂದ ಪ್ರಶಸ್ತಿ ಜಯಿಸಿದಂತಾಗಿದೆ.

2024ರಲ್ಲಿ ಆರ್‌ಸಿಬಿ ಮಹಿಳೆಯರು, 2025ರಲ್ಲಿ ಆರ್‌ಸಿಬಿ ಪುರುಷರ ತಂಡವು ಐಪಿಎಲ್‌ನಲ್ಲಿ ಪ್ರಶಸ್ತಿ ಜಯಸಿತ್ತು. ಈ ಬಾರಿ ಮತ್ತೆ ವನಿತೆಯರ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು.

ಫೈನಲ್ ಪಂದ್ಯದಲ್ಲಿ ನಾಯಕಿಯ ಆಟವಾಡಿದ ಸ್ಮೃತಿ 87 ರನ್ ಗಳಿಸಿದರು. ಇದು ಡಬ್ಲ್ಯು‌ಪಿಎಲ್ ಫೈನಲ್‌ನಲ್ಲಿ ಬ್ಯಾಟರ್‌ವೊಬ್ಬರು ಗಳಿಸಿದ ಗರಿಷ್ಠ ಮೊತ್ತ.

ಜೆಮಿಮಾ ಅವರನ್ನು ತಬ್ಬಿಕೊಂಡ ಮಂದಾನ

ಆರ್‌ಸಿಬಿ ಗೆಲುವಿನ ಜೋಡಿ ಜಾರ್ಜಿಯಾ ವೋಲ್ ಹಾಗೂ ಸ್ಮೃತಿ ಮಂದಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.