ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಜಾರ್ಖಂಡ್ ತಂಡದ ವಿರುದ್ಧ ವೇಗದ ದ್ವಿಶತಕ ದಾಖಲಿಸಿ ಮುಂಬೈ ತಂಡದ ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ ವಿಶ್ವ ದಾಖಲೆ ಬರೆದಿದ್ದಾರೆ.
ಲಿಸ್ಟ್ ಎ ಮತ್ತು ಏಕದಿನದ 50 ಓವರ್ಗಳ ಪಂದ್ಯಗಳಲ್ಲಿ ಅತೀ ವೇಗದ ದ್ವಿಶತಕ ಬಾರಿಸಿದ ಬ್ಯಾಟ್ಸ್ಮೆನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ ಜೈಸ್ವಾನ್. ಈತನ ವಯಸ್ಸು 17 ವರ್ಷ 292 ದಿನಗಳು.
ಈ ಹಿಂದೆ 1975ರಲ್ಲಿ ಅಲನ್ ಬರೊ ಅವರು ದಕ್ಷಿಣ ಆಫ್ರಿಕಾದ ದೇಶೀಯ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿ ದಾಖಲೆ ಬರೆದಿದ್ದರು. ಆಗ ಅವರ ವಯಸ್ಸು 20 ಆಗಿತ್ತು.
ಬೆಂಗಳೂರಿನ ಆಲೂರ್ನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಎಲೈಟ್ ಗ್ರೂಪ್ ಎ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಮುಂಬೈ ತಂಡ 3 ವಿಕೆಟ್ ಕಳೆದುಕೊಂಡು 358 ರನ್ ದಾಲಿಸಿದೆ.ಇದರಲ್ಲಿಯಶಸ್ವಿ ಜೈಸ್ವಾಲ್ 154 ಬಾಲ್ ಎದುರಿಸಿದ್ದು 12 ಸಿಕ್ಸರ್ ಮತ್ತು17 ಬೌಂಡರಿಗಳ ಸಹಾಯದಿಂದ 203 ರನ್ ದಾಖಲಿಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಯಶಸ್ವಿ ದಾಖಲಿಸಿದ ಮೂರನೇ ಶತಕ ಇದಾಗಿದೆ. ಈ ಪಂದ್ಯದ ಮೂಲಕ ಎ ಲಿಸ್ಟ್ನಲ್ಲಿ ಪಾದರ್ಪಣೆ ಮಾಡಿದ ಜೈಸ್ವಾಲ್ 5 ಪಂದ್ಯಗಳ್ಲಿ 585 ರನ್ ದಾಖಲಿಸಿದ್ದಾರೆ. ಪ್ರಸ್ತುತ ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮೆನ್ ಕೂಡಾ ಇವರೇ.
ಕೇರಳದ ಸಂಜು ಸ್ಯಾಮ್ಸನ್ ವೇಗದ ದ್ವಿಶತಕ ದಾಖಲಿಸಿದ ಬೆನ್ನಲ್ಲೇ ಜೈಸ್ವಾಲ್ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ (ಮೂರು ಬಾರಿ ), ಶಿಖರ್ ಧವನ್, ಕೆ.ವಿ ಕೌಶನ್ ಮತ್ತು ಸಂಜು ಸ್ಯಾಮ್ಸನ್ ನಂತರ ದ್ವಿಶತಕ ಬಾರಿಸಿದ 7ನೇ ಬ್ಯಾಟ್ಸ್ಮೆನ್ ಆಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.