ADVERTISEMENT

ಡುರಾಂಡ್‌ ಕಪ್‌: ಪ್ರಶಸ್ತಿಗೆ 24 ತಂಡಗಳ ಪೈಪೋಟಿ

ಪಿಟಿಐ
Published 4 ಜುಲೈ 2025, 16:01 IST
Last Updated 4 ಜುಲೈ 2025, 16:01 IST
<div class="paragraphs"><p>ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ&nbsp;ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ 134ನೇ ಆವೃತ್ತಿಯ ಟ್ರೋಫಿ ಅನಾವರಣ ಮಾಡಿದರು</p></div>

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ 134ನೇ ಆವೃತ್ತಿಯ ಟ್ರೋಫಿ ಅನಾವರಣ ಮಾಡಿದರು

   

–ಪಿಟಿಐ ಚಿತ್ರ

ನವದೆಹಲಿ: ಇದೇ 23ರಂದು ಆರಂಭವಾಗಲಿರುವ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ 134ನೇ ಆವೃತ್ತಿಯಲ್ಲಿ 24 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಈ ಟೂರ್ನಿಯು, ಏಷ್ಯಾದ ಅತ್ಯಂತ ಹಳೆಯ ಫುಟ್‌ಬಾಲ್‌ ಟೂರ್ನಿ ಎಂಬ ಹಿರಿಮೆ ಹೊಂದಿದೆ.

ADVERTISEMENT

24 ತಂಡಗಳನ್ನು 6 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪಶ್ಚಿಮ ಬಂಗಾಳ, ಜಾರ್ಖಂಡ್‌, ಮಣಿಪುರ, ಮೇಘಾಲಯ ಹಾಗೂ ಅಸ್ಸಾಂನಲ್ಲಿ ಪಂದ್ಯಗಳು ನಡೆಯಲಿವೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಟ್ರೋಫಿ ಅನಾವರಣ ಮಾಡಿದರು. ಭಾರತೀಯ ಸೇನೆಯು ಈ ಟೂರ್ನಿಯನ್ನು ಆಯೋಜಿಸುತ್ತಿದೆ.

durand cup logo

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.