ಫುಟ್‌ಬಾಲ್
ಬೆಂಗಳೂರು: ಎಫ್‌ಸಿ ಡೆಕ್ಕನ್ ತಂಡವು ಬಿಡಿಎಫ್‌ಎ ಎ ಡಿವಿಷನ್ ಲೀಗ್‌ನ ಪಂದ್ಯದಲ್ಲಿ 2–2 ಗೋಲುಗಳಿಂದ ರೂಟ್ಸ್ ಎಫ್‌ಎಸ್ ತಂಡದೊಂದಿಗೆ ಡ್ರಾ ಸಾಧಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಡೆಕ್ಕನ್ ಪರ ವಿನಯ್ ಎಂ. (52ನೇ ನಿಮಿಷ) ಮತ್ತು ಹಿಜಾಮ್ ಎಸ್. ಸಿಂಗ್ (77ನೇ) ಗೋಲು ಗಳಿಸಿದರು. ರೂಟ್ಸ್ ಪರ ಸೀಗೌ ಲುನ್ ಹೆಂಗ್ನಾ (16ನೇ ಮತ್ತು 32ನೇ) ಎರಡು ಬಾರಿ ಚೆಂಡನ್ನು ಗುರಿ ಸೇರಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ವಿಜಯನಗರ ಎಫ್‌ಸಿ ತಂಡವು ಗೋಲುರಹಿತವಾಗಿ ಏಜೀಸ್ ಎಫ್‌ಸಿ ತಂಡದೊಂದಿಗೆ ಡ್ರಾ ಮಾಡಿಕೊಂಡಿತು.
ಸಾಂಘಿಕ ಆಟ ಪ್ರದರ್ಶಿಸಿದ ಜೈ ಭಾರತ್ ನಗರ ಎಫ್‌ಸಿ ತಂಡವು 3–0 ಗೋಲುಗಳಿಂದ ಫ್ರೀಡಂ ತಂಡವನ್ನು ಮಣಿಸಿತು. ಜೈಭಾರತ್ ತಂಡದ ಕೆ.ಎಂ. ಮೊಹಮ್ಮದ್ ಶಮೀಂ (16ನೇ), ಮಹಮ್ಮದ್ ಡ್ಯಾನಿಶ್ (23ನೇ) ಮತ್ತು ಮೊಹಮ್ಮದ್ ರಬೀಹ್ ಕೆ.ಪಿ (40ನೇ) ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.