ADVERTISEMENT

ಡಿಸೆಂಬರ್ 21ರಂದು ಎಐಎಫ್‌ಎಫ್‌ ಎಜಿಎಂ

ಪಿಟಿಐ
Published 23 ಅಕ್ಟೋಬರ್ 2020, 13:38 IST
Last Updated 23 ಅಕ್ಟೋಬರ್ 2020, 13:38 IST
ಪ್ರಫುಲ್‌ ಪಟೇಲ್‌–ಪಿಟಿಐ ಚಿತ್ರ
ಪ್ರಫುಲ್‌ ಪಟೇಲ್‌–ಪಿಟಿಐ ಚಿತ್ರ   

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್‌) ವಾರ್ಷಿಕ ಸಾಮಾನ್ಯ ಸಭೆಯು (ಎಜಿಎಂ) ಆನ್‌ಲೈನ್‌ ಮೂಲಕ ಡಿಸೆಂಬರ್‌ 21ರಂದು ನಡೆಯಲಿದೆ. ಫೆಡರೇಷನ್‌ ಗುರುವಾರ ಈ ವಿಷಯ ತಿಳಿಸಿದೆ.

ರಾಷ್ಟ್ರೀಯ ಕ್ರೀಡಾ ಸಂಹಿತೆಯ ಪ್ರಕಾರ ಎಐಎಫ್‌ಎಫ್‌ ಅಧ್ಯಕ್ಷ ಹುದ್ದೆಯ ಅಧಿಕಾರದ ಮಿತಿ ಮತ್ತು ಇತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಸದ್ಯ ಹುದ್ದೆಯಲ್ಲಿರುವ ಕೇಂದ್ರದ ಮಾಜಿ ಸಚಿವ ಪ್ರಫುಲ್‌ ಪಟೇಲ್‌ಅಧ್ಯಕ್ಷರಾಗಿ 12 ವರ್ಷಗಳನ್ನು ಪೂರೈಸಿದ್ದಾರೆ.

ಕ್ರೀಡಾ ಸಂಹಿತೆಯ ಅನ್ವಯ, ರಾಷ್ಟ್ರೀಯ ಕ್ರೀಡಾ ಫಡರೇಷನ್‌ನ ಅಧ್ಯಕ್ಷರೊಬ್ಬರು ಗರಿಷ್ಠ 12 ವರ್ಷಗಳ ಕಾಲ ಅಧ್ಯಕ್ಷ ಹುದ್ದೆಯಲ್ಲಿ ಇರಬಹುದಾಗಿದೆ.

ADVERTISEMENT

ಈ ಮೊದಲು ದೀರ್ಘಕಾಲ ಅಧ್ಯಕ್ಷರಾಗಿದ್ದ ಪ್ರಿಯ ರಂಜನ್‌ ದಾಸ್‌ಮುನ್ಷಿ 2008ರಲ್ಲಿ ಹೃದಯ ಸ್ತಂಭನಕ್ಕೊಳಗಾಗಿ ಕೋಮಾಕ್ಕೆ ಜಾರಿದ್ದರು. ಆ ಬಳಿಕ ಒಂದು ವರ್ಷ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಪ್ರಫುಲ್‌ ಪಟೇಲ್‌, 2009ರ ಅಕ್ಟೋಬರ್‌ನಲ್ಲಿ ಪೂರ್ಣಾವಧಿ ಅಧ್ಯಕ್ಷರಾಗಿ ಆಯ್ಕೆಯಾದರು. 2012 ಹಾಗೂ 2016ರ ಚುನಾವಣೆಗಳಲ್ಲಿ ಮರು ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.