ADVERTISEMENT

ಯುಸಿಎಲ್‌ನಲ್ಲಿ ಗೋಲು ಗಳಿಸಿದ ಅತಿ ಕಿರಿಯ ಆಟಗಾರ ಎನಿಸಿದ ಫಾಟಿ: ಬಾರ್ಸಿಲೋನಾಗೆ ಜಯ

ಯುರೋಪಿಯನ್‌ ಚಾಂಪಿಯನ್ಸ್ ಲೀಗ್

ಏಜೆನ್ಸೀಸ್
Published 11 ಡಿಸೆಂಬರ್ 2019, 14:13 IST
Last Updated 11 ಡಿಸೆಂಬರ್ 2019, 14:13 IST
   

ಮಿಲಾನ್‌ (ಇಟಲಿ): ಯುರೋಪಿಯನ್‌ ಫುಟ್‌ಬಾಲ್‌ ಸಂಸ್ಥೆಗಳ ಒಕ್ಕೂಟ (ಯುಇಎಫ್‌ಎ) ಚಾಂಪಿಯನ್ಸ್ ಲೀಗ್‌ನ ಗುಂಪು ಹಂತದ ಪಂದ್ಯದಲ್ಲಿ ಇಂಟರ್‌ ಮಿಲಾನ್‌ ತಂಡದ ವಿರುದ್ಧ ಬಾರ್ಸಿಲೋನಾ ಆಟಗಾರ ಅನ್ಸು ಫಾಟಿ ಗೋಲು ಗಳಿಸಿದರು. ಆ ಮೂಲಕ ಯುರೋಪಿಯನ್‌ ಚಾಂಪಿಯನ್ಸ್‌ ಲೀಗ್‌ನಲ್ಲಿ (ಯುಸಿಎಲ್‌) ಗೋಲು ಬಾರಿಸಿದ ಅತಿ ಕಿರಿಯ ಆಟಗಾರ ಎನಿಸಿದರು. ಪಂದ್ಯದ 86ನೇ ನಿಮಿಷದಲ್ಲಿ ಗೋಲು ಗಳಿಸಿದ ಫಾಟಿ ವಯಸ್ಸು ಈಗ 17 ವರ್ಷ, ನಲವತ್ತು ದಿನಗಳು.

ಇಲ್ಲಿನ ಸ್ಯಾನ್‌ ಸಿರೊ ಕ್ರೀಡಾಂಗಣದಲ್ಲಿ ನಡೆದಎಫ್‌ ಗುಂಪಿನ ಅಂತಿಮ ಪಂದ್ಯದಲ್ಲಿ ಬಾರ್ಸಿಲೋನಾ ತಂಡ ಮಿಲಾನ್‌ ವಿರುದ್ಧ 2–1 ಅಂತರದಲ್ಲಿ ಗೆಲುವು ಸಾಧಿಸಿತು. ಬಾರ್ಸಿಲೋನಾ ತಂಡದ ಕಾರ್ಲೆಸ್‌ ಪೆರೆಜ್‌ 23ನೇ ನಿಮಿಷದಲ್ಲಿ ಗೋಲು ಗಳಿಸಿದ್ದರು. 44ನೇ ನಿಮಿಷದಲ್ಲಿ ಮಿಲಾನ್‌ ತಂಡದ ರೊಮೆಲು ಲುಕಾಕು ಗೋಲು ಗಳಿಸಿ ಹೋರಾಟವನ್ನು ಸಮಬಲ ಗೊಳಿಸಿದ್ದರು.

ಅಂತಿಮವಾಗಿ ಫಾಟಿ 86ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡವನ್ನು ಜಯದತ್ತ ಕೊಂಡೊಯ್ದರು.

ADVERTISEMENT

ಆಡಿರುವ ಒಟ್ಟು ಆರು ಪಂದ್ಯಗಳಲ್ಲಿ ನಾಲ್ಕು ಜಯ ಸಾಧಿಸಿರುವ ಬಾರ್ಸಿಲೋನಾ ‘ಎಫ್‌’ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇಷ್ಷೇ ಪಂದ್ಯಗಳಿಂದ 3 ಗೆಲುವು ಸಾಧಿಸಿರುವ ಡಾರ್ಟ್‌ಮಂಡ್‌, ಎರಡು ಗೆಲುವು ಕಂಡಿರುವ ಇಂಟರ್‌ ಮಿಲಾನ್‌ ಕ್ರಮವಾಗಿಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ. ಒಂದೂ ಗೆಲುವು ಸಾಧಿಸದ ಸ್ಲಾವಿಯಾ ಪ್ರಹ ಕೊನೆಯ ಸ್ಥಾನದಲ್ಲಿದೆ.

1997ರಲ್ಲಿ ರೋಸೆನ್‌ಬರ್ಗ್‌ ವಿರುದ್ದದ ಪಂದ್ಯದಲ್ಲಿ ಗೋಲು ಗಳಿಸಿದ್ದಪೀಟರ್‌ ಒಫೋರಿ ಕ್ಯುಆಯೆಯುಸಿಎಲ್‌ನಲ್ಲಿ ಗೋಲು ಬಾರಿಸಿದ ಅತಿ ಕಿರಿಯ ಆಟಗಾರ ಎನಿಸಿದ್ದರು.ಒಲಿಂಪಿಯಾಕಸ್‌ ತಂಡದ ಪರ ಕಣಕ್ಕಿಳಿದಿದ್ದ ಪೀಟರ್‌ಗೆ ಆಗ 17 ವರ್ಷ 195 ದಿನ ವಯಸ್ಸಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.