ADVERTISEMENT

ಮೆಸ್ಸಿ ಕೇರಳ ಭೇಟಿ ರದ್ದು: ಕ್ರೀಡಾ ಸಚಿವ ವಿ.ಅಬ್ದುರಹಿಮಾನ್‌

ವೇಳಾಪಟ್ಟಿ ಗೊಂದಲ: ಪ್ರವಾಸ ಕೈಬಿಟ್ಟ ಅರ್ಜೆಂಟೀನಾ ಫುಟ್‌ಬಾಲ್ ತಂಡ

ಪಿಟಿಐ
Published 4 ಆಗಸ್ಟ್ 2025, 23:51 IST
Last Updated 4 ಆಗಸ್ಟ್ 2025, 23:51 IST
ಲಯೊನೆಲ್‌ ಮೆಸ್ಸಿ
ಲಯೊನೆಲ್‌ ಮೆಸ್ಸಿ   

ತಿರುವನಂತಪುರ : ಲಯೊನೆಲ್‌ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಫುಟ್‌ಬಾಲ್ ತಂಡವು ವೇಳಾಪಟ್ಟಿ ಗೊಂದಲದಿಂದಾಗಿ ಕೇರಳ ಪ್ರವಾಸವನ್ನು ರದ್ದುಗೊಳಿಸಿದೆ. ಈ ವಿಚಾರವನ್ನು ಕೇರಳದ ಕ್ರೀಡಾ ಸಚಿವ ವಿ.ಅಬ್ದುರಹಿಮಾನ್‌ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದಾರೆ.

‘ಅಕ್ಟೋಬರ್‌ ತಿಂಗಳಿನಲ್ಲಿ ಕೇರಳಕ್ಕೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಅರ್ಜೆಂಟೀನಾ ತಂಡ ತಿಳಿಸಿದೆ. ಆದರೆ, ಅಕ್ಟೋಬರ್‌ನಲ್ಲಿ ಮಾತ್ರ ಈ ಪಂದ್ಯ ನಡೆಯಬೇಕೆಂದು ಆಯೋಜಕರು ಪಟ್ಟುಹಿಡಿದಿದ್ದಾರೆ. ಹೀಗಾಗಿ, ವೇಳಾಪಟ್ಟಿಯ ಗೊಂದಲದಿಂದ ಮೆಸ್ಸಿ ನೇತೃತ್ವದ ತಂಡ ರಾಜ್ಯ ಪ್ರವಾಸವನ್ನು ಕೈಬಿಟ್ಟಿದೆ’ ಎಂದು ಹೇಳಿದ್ದಾರೆ.

ಆಯೋಜಕರು ಪಂದ್ಯದ ಶುಲ್ಕವನ್ನು ಈಗಾಗಲೇ ಪಾವತಿಸಿದ್ದಾರೆ. ಅರ್ಜೆಂಟೀನಾ ತಂಡವು ಕೇರಳದಲ್ಲಿ ಪ್ರದರ್ಶನ ಪಂದ್ಯವನ್ನು ಆಡಲಿದೆ ಎಂದು ಅಬ್ದುರಹಿಮಾನ್‌ ಈಚೆಗೆ ವಿಶ್ವಾಸ ವ್ಯಕ್ತಪಡಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.