ಬಿಷ್ಕೆಕ್, ಕಿರ್ಗಿಸ್ ರಿಪಬ್ಲಿಕ್: ಭಾರತ ವನಿತೆಯರ ತಂಡವು ಶುಕ್ರವಾರ 2–1 ಗೋಲುಗಳಿಂದ ಉಜ್ಬೇಕಿಸ್ತಾನ ತಂಡವನ್ನು ಮಣಿಸಿ, ಎಎಫ್‌ಸಿ 17 ವರ್ಷದೊಳಗಿನವರ ಏಷ್ಯನ್ ಕಪ್ ಟೂರ್ನಿಗೆ ಮೊದಲ ಬಾರಿ ಅರ್ಹತೆ ಪಡೆಯಿತು.
ಭಾರತದ ಪರ ತಂಡಮೋನಿ ಬಾಸ್ಕಿ (55ನೇ ನಿಮಿಷ) ಮತ್ತು ಅನುಷ್ಕಾ ಕುಮಾರಿ (66ನೇ ನಿಮಿಷ) ಗೋಲು ದಾಖಲಿಸಿದರು. ಎದುರಾಳಿ ತಂಡದ ಪರ ಶಖ್ಜೋಡಾ ಅಲಿಖೋನೋವಾ (38ನೇ ನಿಮಿಷ) ಚೆಂಡನ್ನು ಗುರಿ ಸೇರಿಸಿದರು.
ಈ ಗೆಲುವಿನೊಂದಿಗ ಭಾರತ ತಂಡವು ಆರು ಅಂಕಗಳೊಂದಿಗೆ ಗ್ರೂಪ್ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು. ಮುಂದಿನ ವರ್ಷ ಚೀನಾದಲ್ಲಿ ನಡೆಯಲಿರುವ ಎಎಫ್‌ಸಿ ಟೂರ್ನಿಗೆ ಅರ್ಹತೆ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.