ADVERTISEMENT

ಅಟ್ಲೆಟಿಕೊ ಮಹಿಳಾ ಫುಟ್‌ಬಾಲ್‌ ಕ್ಲಬ್‌ನ ನಾಲ್ವರಿಗೆ ಕೋವಿಡ್‌-19 ದೃಢ

ಏಜೆನ್ಸೀಸ್
Published 12 ಆಗಸ್ಟ್ 2020, 14:38 IST
Last Updated 12 ಆಗಸ್ಟ್ 2020, 14:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮ್ಯಾಡ್ರಿಡ್‌: ಅಟ್ಲೆಟಿಕೊ ಮ್ಯಾಡ್ರಿಡ್‌ ಮಹಿಳಾ ಫುಟ್‌ಬಾಲ್‌ ಕ್ಲಬ್‌ನ ನಾಲ್ವರು ಸದಸ್ಯರಲ್ಲಿ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟಿದೆ. ಇನ್ನು 10 ದಿನಗಳ ಬಳಿಕ ಅಟ್ಲೆಟಿಕೊ ತಂಡವು ಚಾಂಪಿಯನ್ಸ್‌ ಲೀಗ್‌ನಲ್ಲಿ ಬಾರ್ಸಿಲೋನಾ ಎಫ್‌ಸಿ ವಿರುದ್ಧದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಆಡಬೇಕಿದೆ. ಹೀಗಾಗಿ ತಂಡದಲ್ಲಿನ ಈ ಬೆಳವಣಿಗೆ ಆತಂಕ ಮೂಡಿಸಿದೆ.

‘ತಂಡದ ಆಟಗಾರ್ತಿಯರು, ಕೋಚ್‌ಗಳು ಹಾಗೂ ಇತರ ಸಿಬ್ಬಂದಿಯನ್ನು ಇತ್ತೀಚೆಗೆ ಕೋವಿಡ್‌ ತಪಾಸಣೆಗೆ ಒಳಪಡಿಸಲಾಗಿತ್ತು. ಸದ್ಯ ಅದರ ವರದಿ ಬಂದಿದ್ದು, ನಾಲ್ವರಲ್ಲಿ ಸೋಂಕು ಕಂಡುಬಂದಿದೆ’ ಎಂದು ಅಟ್ಲೆಟಿಕೊ ಮ್ಯಾಡ್ರಿಡ್‌ ತಂಡ ಹೇಳಿದೆ.

ಹೋದ ವಾರವೂ ಕೆಲವರಲ್ಲಿ ಸೋಂಕು ಕಂಡುಬಂದ ಕಾರಣ ತಂಡದ ತರಬೇತಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಆಟಗಾರ್ತಿಯರು ಶಿಬಿರದಲ್ಲೇ ಬಂದಿಯಾಗಿದ್ದರು.

ADVERTISEMENT

‘ಕೋವಿಡ್‌ ಸೋಂಕಿತರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಅವರನ್ನು ಮನೆಯಲ್ಲೇ ಕ್ವಾರಂಟೈನ್‌ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ’ ಎಂದು ತಂಡದ ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.