ಬ್ಯಾರಕ್‌ಪುರ್, ಬಂಗಾಳ: ಖ್ಯಾತನಾಮ ಆಟಗಾರ್ತಿ ಬಾಲಾದೇವಿ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಅತಿಥೇಯ ಶ್ರೀಭೂಮಿ ಫುಟ್‌ಬಾಲ್ ಕ್ಲಬ್ ತಂಡವು 3–2ರಿಂದ ಭಾರತ ಮಹಿಳಾ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.
ಭಾನುವಾರ ನಡೆದ ಪಂದ್ಯದಲ್ಲಿ ಶ್ರೀಭೂಮಿ ತಂಡವು 3–2 ರಿಂದ ಸೇತು ಫುಟ್‌ಬಾಲ್ ಕ್ಲಬ್ ವಿರುದ್ಧ ಜಯಿಸಿತು. ಬಾಲಾದೇವಿ ಅವರು 39ನೇ ನಿಮಿಷ, 49ನೇ ನಿಮಿಷ (ಪೆನಾಲ್ಟಿ) ಮತ್ತು 65ನೇ ನಿಮಿಷದಲ್ಲಿ ಗೋಲು ಗಳಿಸಿದರು. ಆದರೆ ಪಂದ್ಯದಲ್ಲಿ ಮೊದಲ ಗೋಲು ಗಳಿಸಿದ್ದು ಸೇತು ತಂಡದ ಹದಿಜಾ ನಂದಗೋ (37ನಿ) ಅವರು. ಆದರೆ ಬಾಲಾ ದೇವಿ ಅವರು ವೇಗವಾಗಿ ಆಡಿ ಶ್ರೀಭೂಮಿ ತಂಡಕ್ಕೆ ಮುನ್ನಡೆ ಒದಗಿಸಿದರು.
88ನೇ ನಿಮಿಷದಲ್ಲಿ ಸೇತು ತಂಡದ ಬಬಿನಾದೇವಿ ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.