ADVERTISEMENT

ಬಲೋನ್ ಡೋ’ರ್‌ ಪ್ರಶಸ್ತಿ ಪ್ರದಾನ ಸೆ. 22ಕ್ಕೆ

ಏಜೆನ್ಸೀಸ್
Published 19 ಮೇ 2025, 15:22 IST
Last Updated 19 ಮೇ 2025, 15:22 IST
<div class="paragraphs"><p>ಫುಟ್‌ಬಾಲ್‌&nbsp;</p></div>

ಫುಟ್‌ಬಾಲ್‌ 

   

ಪ್ಯಾರಿಸ್‌: ವರ್ಷದ ವಿಶ್ವಶ್ರೇಷ್ಠ ಫುಟ್‌ಬಾಲ್‌ ಆಟಗಾರನಿಗೆ ನೀಡುವ ಬಲೋನ್ ಡೋ’ರ್‌ ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್‌ 22ರಂದು ನಡೆಯಲಿದೆ ಎಂದು ಆಯೋಜಕರು ಸೋಮವಾರ ತಿಳಿಸಿದ್ದಾರೆ.

ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ನೀಡಲಾಗುವ ಪ್ರಶಸ್ತಿಗಳ ಸಂಖ್ಯೆ ಒಂದೇ ಪ್ರಮಾಣದಲ್ಲಿ ಇರಲಿದೆ. ಇದರಂತೆ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ ಆರು ಪ್ರಶಸ್ತಿಗಳನ್ನು ನೀಡಲಾಗುವುದು. ಇದರ ಜೊತೆಗೆ ಹೆಚ್ಚುವರಿಯಾಗಿ, ಐಕ್ಯಭಾವ ಪ್ರೋತ್ಸಾಹಿಸುವ ಸಾಕ್ರಟಿಸ್‌ ಪ್ರಶಸ್ತಿಯನ್ನೂ ನೀಡಲಾಗುವುದು. ಈ ಪ್ರಶಸ್ತಿ ಪುರುಷರ ಅಥವಾ ಮಹಿಳಾ ವಿಭಾಗದಲ್ಲಿ ಮುಕ್ತವಾಗಿದೆ.

ADVERTISEMENT

ನಾಮನಿರ್ದೇಶನಗೊಂಡವರ ಪಟ್ಟಿಯನ್ನು ಆಗಸ್ಟ್‌ ಆರಂಭದಲ್ಲಿ ಘೋಷಿಸಲಾಗುವುದು.

ದುಶಾತುಲೆ ಥಿಯೇಟರ್‌ನಲ್ಲಿ 2024ರ ಪ್ರಶಸ್ತಿ ಸಮಾರಂಭವು ರಿಯಲ್ ಮ್ಯಾಡ್ರಿಡ್‌ ಬಹಿಷ್ಕಾರದಿಂದ ಕೊಂಚ ಕಳೆಗುಂದಿತ್ತು. ತನ್ನ ತಂಡದಲ್ಲಿದ್ದ ಬ್ರೆಜಿಲ್‌ನ ಫಾರ್ವರ್ಡ್‌ ಆಟಗಾರ ವಿನಿಸಿಯಸ್ ಜೂನಿಯರ್ ಅವರನ್ನು ಪುರುಷರ ವಿಭಾಗದ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಿಲ್ಲ ಎಂದು ಗೊತ್ತಾಗಿದ್ದರಿಂದ ಆ ಕ್ಲಬ್ ಸಮಾರಂಭ ಬಹಿಷ್ಕರಿಸಿತ್ತು. ಆ ವರ್ಷದ ಪ್ರಶಸ್ತಿ ಸ್ಪೇನ್‌ನ ರೋದ್ರಿ ಅವರ ಪಾಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.