ADVERTISEMENT

ಫುಟ್‌ಬಾಲ್‌: ರಾಯಲ್ಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 20:12 IST
Last Updated 5 ಫೆಬ್ರುವರಿ 2019, 20:12 IST

ಬೆಂಗಳೂರು: ಯು.ಬಾಬು ಗಳಿಸಿದ ಏಕೈಕ ಗೋಲಿನ ನೆರವಿನಿಂದ ರಾಯಲ್ಸ್‌ ಎಫ್‌ಸಿ ತಂಡ ಬಿಡಿಎಫ್‌ಎ ‘ಬಿ’ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಪಂದ್ಯದಲ್ಲಿ ಗೆದ್ದಿದೆ.

ಮಂಗಳವಾರ ನಡೆದ ‘ಬಿ’ ಗುಂಪಿನ ಹೋರಾಟದಲ್ಲಿ ರಾಯಲ್ಸ್‌ 1–0 ಗೋಲಿನಿಂದ ಬಾಷ್‌ ಎಫ್‌ಸಿ ತಂಡವನ್ನು ಮಣಿಸಿತು. ಬಾಬು 41ನೇ ನಿಮಿಷದಲ್ಲಿ ಗೋಲು ಹೊಡೆದರು.

ಸೌತ್‌ ಇಂಡಿಯಾ ಎಫ್‌ಸಿ ಮತ್ತು ವೆಹಿಕಲ್ಸ್‌ ಎಫ್‌ಸಿ ನಡುವಣ ಪಂದ್ಯ 1–1 ಗೋಲುಗಳಿಂದ ಸಮಬಲವಾಯಿತು.

ADVERTISEMENT

ವೆಹಿಕಲ್ಸ್‌ ತಂಡದ ಪ್ರಕಾಶ್‌ 29ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿದರು. ಸೌತ್ ಇಂಡಿಯಾ ತಂಡದ ಮಹೇಶ್‌ 61ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.