ADVERTISEMENT

ಫುಟ್‌ಬಾಲ್‌: ಗಜಾನನ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 20:01 IST
Last Updated 18 ಫೆಬ್ರುವರಿ 2019, 20:01 IST

ಬೆಂಗಳೂರು: ಭರತ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ಶ್ರೀ ಗಜಾನನ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಬಿ’ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಗೆದ್ದಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಬಿ’ ಗುಂಪಿನ ಪೈಪೋಟಿಯಲ್ಲಿ ಗಜಾನನ 4–0 ಗೋಲುಗಳಿಂದ ವೆಹಿಕಲ್ಸ್‌ ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

21ನೇ ನಿಮಿಷದಲ್ಲಿ ಗೋಲು ಗಳಿಸಿದ ಭರತ್‌, 34ನೇ ನಿಮಿಷದಲ್ಲೂ ಕಾಲ್ಚಳಕ ತೋರಿದರು. ಜೊಶುವಾ 38ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ತಂಡದ ಗೆಲುವಿನ ಹಾದಿ ಸುಗಮ ಮಾಡಿದರು. 65ನೇ ನಿಮಿಷದಲ್ಲಿ ಅರುಣ್‌ ಮೋಡಿ ಮಾಡಿದರು.

ADVERTISEMENT

ದಿನದ ಇನ್ನೊಂದು ಪಂದ್ಯದಲ್ಲಿ ಬಾಷ್‌ ಎಫ್‌ಸಿ 1–0 ಗೋಲಿನಿಂದ ಬೆಂಗಳೂರು ಗನ್ನರ್ಸ್‌ ಎಫ್‌ಸಿ ಎದುರು ಗೆದ್ದಿತು.

ಅರುಣ್‌ ಕುಮಾರ್‌ 30ನೇ ನಿಮಿಷದಲ್ಲಿ ಗೋಲು ಹೊಡೆದು, ಬಾಷ್‌ ತಂಡದ ಗೆಲುವಿನ ರೂವಾರಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.