ADVERTISEMENT

ಫುಟ್‌ಬಾಲ್‌: ಫೈನಲ್‌ಗೆ ಸನ್‌ರೈಸ್‌ ಎಫ್‌ಸಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2018, 15:51 IST
Last Updated 1 ಜುಲೈ 2018, 15:51 IST

ಬೆಂಗಳೂರು: ಶೆರ್ವಿನ್‌ ಹಾಗೂ ಕಾರ್ತಿಕ್‌ ಅವರು ಗಳಿಸಿದ ತಲಾ ಒಂದು ಗೋಲಿನ ನೆರವಿನಿಂದ ಸನ್‌ರೈಸ್‌ ತಂಡವು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದೆ.

ಭಾನುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸನ್‌ರೈಸ್‌ ತಂಡವು ಸೌತ್‌ ಇಂಡಿಯಾ ಎಫ್‌ಸಿ ತಂಡವನ್ನು 2–0 ಗೋಲುಗಳಿಂದ ಮಣಿಸಿದೆ.

ವಿಜಯೀ ತಂಡದ ಶೆರ್ವಿನ್‌ (25ನೇ ನಿ.) ಹಾಗೂ ಕಾರ್ತಿಕ್‌ (59 ನೇ ನಿ.) ಅವರು ತಲಾ ಒಂದು ಗೋಲು ಗಳಿಸಿದರು.

ADVERTISEMENT

ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಗೋವನ್ಸ್‌ ಎಫ್‌ಸಿ ತಂಡವು ಗೆದ್ದಿದೆ.

ಗೋವನ್ಸ್‌ ಎಫ್‌ಸಿ ಹಾಗೂ ಬಿಟಿಎಂ ಎಫ್‌ಸಿ ತಂಡಗಳ ನಡುವಿನ ಪಂದ್ಯವು ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು ತಲಾ ಎರಡು ಗೋಲು ಗಳಿಸಿದವು.

ಗೋವನ್ಸ್‌ ತಂಡದ ಡೊನಾಲ್ಡ್‌ (57ನೇ ನಿ.) ಹಾಗೂ ಗಿರೀಶ್‌ (50ನೇ ನಿ.) ಅವರು ತಲಾ ಒಂದು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು. ಬಿಟಿಎಂ ತಂಡದ ಯುಗಳ್‌ ಅವರು (10 ಮತ್ತು 34ನೇ ನಿ.) ಎರಡು ಗೋಲು ದಾಖಲಿಸಿದರು.

ನಿಗದಿತ ಸಮಯದಲ್ಲಿ ಎರಡೂ ತಂಡಗಳು ಸಮಬಲ ಸಾದಿಸಿದ್ದರಿಂದ ಪೆನಾಲ್ಟಿ ಅವಕಾಶದ ಮೊರೆ ಹೋಗಬೇಕಾಯಿತು. ಆದರೆ, ಅದರಲ್ಲೂ ಈ ತಂಡಗಳು ಸಮಬಲ ಸಾಧಿಸಿದವು. ಆದರೆ, ಸಡನ್‌ ಡೆತ್‌ ಅವಕಾಶದಲ್ಲಿ ಗೋವನ್ಸ್‌ ಎಫ್‌ಸಿ ತಂಡದ ಹಿಲ್ಟನ್‌ ಹಾಗೂ ಲೇವಿನ್‌ ಪಿಂಟೊ ಅವರು ಗೋಲು ಗಳಿಸಿ ತಂಡ ಜಯ ಗಳಿಸಲು ಕಾರಣರಾದರು.

ಸನ್‌ರೈಸ್‌ ಎಫ್‌ಸಿ ಹಾಗೂ ಗೋವನ್ಸ್‌ ಎಫ್‌ಸಿ ತಂಡಗಳು ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.