ADVERTISEMENT

ಪ್ರತಿಭಟನೆ: ಪಂದ್ಯ ರದ್ದು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 19:55 IST
Last Updated 5 ಡಿಸೆಂಬರ್ 2018, 19:55 IST
ಸಿಐಎಲ್‌ ಎಫ್‌ಸಿಯ ಚಾಂದ್ ಪಾಷ ಸಹಾಯಕ ಕೋಚ್ ಅನ್ನು ಗದರಿಸುತ್ತಿರುವುದು. –ಪ್ರಜಾವಾಣಿ ಚಿತ್ರ
ಸಿಐಎಲ್‌ ಎಫ್‌ಸಿಯ ಚಾಂದ್ ಪಾಷ ಸಹಾಯಕ ಕೋಚ್ ಅನ್ನು ಗದರಿಸುತ್ತಿರುವುದು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ರೆಫರಿಯ ತೀರ್ಪಿಗೆ ಅಸ ಮಾಧಾನ ವ್ಯಕ್ತಪಡಿಸಿ ತಂಡ ಅಂಗಣಕ್ಕೆ ಇಳಿಯದ ಕಾರಣ ಬಿಡಿಎಫ್‌ಎ ಸೂಪರ್ ಡಿವಿಷನ್ ಲೀಗ್‌ ಫುಟ್‌ಬಾಲ್ ಪಂದ್ಯವನ್ನು ರದ್ದು ಮಾಡ ಲಾಯಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಕಂಟ್ರಾಲರೇಟ್ ಆಫ್ ಇನ್‌ಸ್ಪೆಕ್ಷನ್‌ ಇಲೆಕ್ಟ್ರಾನಿಕ್ಸ್‌ (ಸಿಐಎಲ್‌) ಮತ್ತು ಜವಾಹರ್‌ ಯೂನಿಯನ್ ಎಫ್‌ಸಿ ನಡುವೆ ಬುಧವಾರ ಪಂದ್ಯ ನಡೆದಿತ್ತು. ಮುಕ್ತಾಯಕ್ಕೆ ನಿಮಿಷಗಳು ಬಾಕಿ ಇದ್ದಾಗ ಸಿಐಎಲ್‌ 2–1ರಿಂದ ಮುನ್ನಡೆ ಸಾಧಿಸಿತ್ತು.

ಈ ಸಂದರ್ಭದಲ್ಲಿ ಜವಾಹರ್‌ ತಂಡ ಗೋಲು ಗಳಿಸಿತು. ಇದನ್ನು ‘ಆಫ್‌ಸೈಡ್‌’ ಎಂದು ಘೋಷಿಸುವಂತೆ ಸಿಐಎಲ್‌ ಆಟಗಾರರು ರೆಫರಿಯನ್ನು ಕೋರಿದರು. ಸಹಾಯಕ ರೆಫರಿ ಇದಕ್ಕೆ ಒಪ್ಪದಿದ್ದಾಗ ಅವರನ್ನು ಆಟಗಾರರು ತಳ್ಳಿದರು. ಆಟ ಮುಂದುವರಿಸಲು ಇಷ್ಟವಿಲ್ಲ ಎಂದೂ ಹೇಳಿದರು.

ADVERTISEMENT

ಇದೇ ಕ್ರೀಡಾಂಗಣದಲ್ಲಿ ನಡೆದ ’ಎ’ ಡಿವಿಷನ್ ಪಂದ್ಯದಲ್ಲಿ ಯಂಗ್ ಚಾಲೆಂಜರ್ಸ್ ತಂಡ 3–1ರಿಂದ ಪರಿಕ್ರಮ ಎಫ್‌ಸಿಯನ್ನು ಮಣಿಸಿತು. ಚಾಲೆಂಜರ್ಸ್‌ಗೆ ವಿಷ್ಣು (30ನೇ ನಿಮಿಷ), ನದೀಮ್‌ (40ನೇ ನಿ) ಮತ್ತು ಪ್ರವೀಣ್‌ (50ನೇ ನಿ) ಗೋಲು ಗಳಿಸಿಕೊಟ್ಟರೆ, ಪರಿಕ್ರಮಕ್ಕಾಗಿ ಚಿರಂಜೀವಿ (16ನೇ ನಿ) ಚೆಂಡನ್ನು ಗುರಿ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.