ಬೆಂಗಳೂರು: ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ಶನಿವಾರ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ. ಚೆಟ್ರಿ ಅವರಿಗೆ ಇದು ಐಎಸ್‌ಎಲ್‌ನಲ್ಲಿ 150ನೇ ಪಂದ್ಯವಾಗಿದೆ.
ತವರಿನಂಗಳದಲ್ಲಿ ಈ ಬಾರಿಯ ಟೂರ್ನಿಯಲ್ಲಿ ಬಿಎಫ್‌ಸಿ ಅಜೇಯ ಓಟ ಮುಂದುವರಿಸಿದೆ. ಕಂಠೀರವ ಕ್ರೀಡಾಂಣಗದಲ್ಲಿ ಈಚೆಗೆ ನಡೆದಿದ್ದ ಪಂದ್ಯದಲ್ಲಿ ಚೆಟ್ರಿ ಗೋಲು ಹ್ಯಾಟ್ರಿಕ್ ಸಾಧಿಸಿದ್ದರು. ಈ ಬಾರಿ ಅವರು 11 ಪಂದ್ಯಗಳಿಂದ 8 ಗೋಲು ಗಳಿಸಿದ್ದಾರೆ.
ಬಿಎಫ್‌ಸಿ ಒಟ್ಟು 23 ಅಂಕಗಳನ್ನು ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 18 ಅಂಕ ಗಳಿಸಿರುವ ಗೋವಾ ನಾಲ್ಕನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.