ಬೆಂಗಳೂರು: ಇಂಡಿಯನ್ ಸೂಪರ್ ಲೀಗ್‌ನಲ್ಲಿ ಆಡುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ಎಎಫ್‌ಸಿ ಕಪ್ ಪ್ಲೇ ಆಫ್ ಪಂದ್ಯಗಳಿಗೆ ಸಜ್ಜುಗೊಳ್ಳುತ್ತಿದ್ದು, ಕಾಂಗೊ ಆಟಗಾರ ಪ್ರಿನ್ಸ್ ವಿನ್ನಿ ಇಬಾರ ಡೋನಿಯಾಮ ಅವರನ್ನು ಸೇರಿಸಿಕೊಂಡಿದೆ.
ಇತ್ತೀಚೆಗೆ ಲೀಗ್ 2 ಟೂರ್ನಿಯಲ್ಲಿ ಶಟುವುರಕ್ಸ್ ತಂಡದಲ್ಲಿ ಆಡಿದ್ದ, 25 ವರ್ಷದ ಪ್ರಿನ್ಸ್, ಬೆಂಗಳೂರು ತಂಡದೊಂದಿಗೆಎರಡು ವರ್ಷಗಳ ಅವಧಿಗೆ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ವಿಶ್ವದ ಹಲವು ಲೀಗ್‌ಗಳಲ್ಲಿ ಆಡಿರುವ ಪ್ರಿನ್ಸ್, 13 ಪಂದ್ಯಗಳಲ್ಲಿ ಕಾಂಗೊ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ. ನಾಲ್ಕು ಗೋಲುಗಳನ್ನು ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.