ADVERTISEMENT

ಬಿಎಫ್‌ಸಿ ಯುವ ತಂಡಕ್ಕೆ ಅಮೋಘ ಜಯ

ರಿಲಯನ್ಸ್ ಫೌಂಡೇಷನ್ ಡೆವಲಪ್‌ಮೆಂಟ್ ಲೀಗ್‌: ಎಫ್‌ಸಿ ಗೋವಾಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 15:18 IST
Last Updated 15 ಏಪ್ರಿಲ್ 2022, 15:18 IST
ಬಿಎಫ್‌ಸಿ (ಎಡ) ಮತ್ತು ಆರ್‌ಎಫ್‌ವೈಸಿ ತಂಡದ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು
ಬಿಎಫ್‌ಸಿ (ಎಡ) ಮತ್ತು ಆರ್‌ಎಫ್‌ವೈಸಿ ತಂಡದ ಆಟಗಾರರು ಚೆಂಡಿನ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು   

ಬೆಂಗಳೂರು: ಮಿಡ್‌ಫೀಲ್ಡರ್ ಬೆಕೆ ಓರಮ್ ಮತ್ತು ಬದಲಿ ಆಟಗಾರ ರಾಹುಲ್ ರಾಜು ಗೋಲು ಗಳಿಸಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ಗೆ (ಬಿಎಫ್‌ಸಿ) ಅಮೋಘ ಜಯ ತಂದುಕೊಟ್ಟರು.

ಗೋವಾದಲ್ಲಿ ಶುಕ್ರವಾರ ಆರಂಭವಾದ ರಿಲಯನ್ಸ್ ಫೌಂಡೇಷನ್ ಡೆವಲಪ್‌ಮೆಂಟ್ ಲೀಗ್ (ಆರ್‌ಎಫ್‌ಡಿಎಲ್) ಫುಟ್‌ಬಾಲ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಬಿಎಫ್‌ಸಿ 2–0ಯಿಂದ ರಿಲಯನ್ಸ್ ಫೌಂಡೇಷನ್ ಯಂಗ್ ಚಾಂಪ್ಸ್ (ಆರ್‌ಎಫ್‌ವೈಸಿ) ತಂಡವನ್ನು ಮಣಿಸಿತು.

ಯುವ ಆಟಗಾರರಿಗಾಗಿ ಇದೇ ಮೊದಲ ಬಾರಿ ಆಯೋಜಿಸಿರುವ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಎಫ್‌ಸಿ ಗೋವಾ 1–0ಯಿಂದ ಚೆನ್ನೈಯಿನ್ ಎಫ್‌ಸಿಯನ್ನು ಮಣಿಸಿತ್ತು.

ADVERTISEMENT

ಎರಡನೇ ಪಂದ್ಯದ 24ನೇ ನಿಮಿಷದಲ್ಲಿ ಬೆಕೆ ಓರಂ ಅವರಿಂದಾಗಿ ಬೆಂಗಳೂರು ಮುನ್ನಡೆ ಸಾಧಿಸಿತು. ನಿಗದಿತ ಅವಧಿಯ ಕೊನೆಯ ವರೆಗೂ ಈ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಯಿತು. ಇಂಜುರಿ (90+3ನೇ ನಿಮಿಷ) ಅವಧಿಯಲ್ಲಿ ರಾಹುಲ್ ಗೋಲು ಗಳಿಸಿ ಭರ್ಜರಿ ಜಯಕ್ಕೆ ಕಾರಣರಾದರು.

ಚೆನ್ನೈಯಿನ್ ಮತ್ತು ಗೋವಾ ನಡುವಿನ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಜೋವಿಯಲ್ ಡಯಾಸ್ ಗೋಲು ಗಳಿಸಿ ಗೋವಾಗೆ ಗೆಲುವು ತಂದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.