ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಮತ್ತೆ ಸೋಲು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 19:52 IST
Last Updated 13 ಡಿಸೆಂಬರ್ 2023, 19:52 IST
 ಫುಟ್‌ಬಾಲ್‌
ಫುಟ್‌ಬಾಲ್‌   

ಬೆಂಗಳೂರು: ಸಾಂಘಿಕ ಪ್ರದರ್ಶನ ನೀಡಿದ ಚೆನ್ನೈಯಿನ್ ಎಫ್‌ಸಿ ತಂಡವು ಬುಧವಾರ ಇಂಡಿಯನ್‌ ಸೂಪರ್‌ ಲೀಗ್‌ನ ಪಂದ್ಯದಲ್ಲಿ 2–0ಯಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡದ ವಿರುದ್ಧ ಗೆಲುವು ಸಾಧಿಸಿತು.

ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ ತಂಡ ಮತ್ತೆ ಮುಖಭಂಗ ಅನುಭವಿಸಿತು. ರಫೆಲ್ ಕ್ರಿವೆಲ್ಲಾರೊ ಆರನೇ ನಿಮಿಷದಲ್ಲೇ ಚೆಂಡನ್ನು ಗುರಿ ಸೇರಿಸಿ ಚೆನ್ನೈಯಿನ್‌ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಉತ್ತರಾರ್ಧದಲ್ಲಿ ಅದೇ ತಂಡದ ಜೋರ್ಡನ್ ಮುರ್ರೆ (50ನೇ ನಿ) ಚೆಂಡನ್ನು ಗುರಿ ಸೇರಿಸಿ ಅಂತರವನ್ನು ಹೆಚ್ಚಿಸಿದರು.

ಲೀಗ್‌ನಲ್ಲಿ ಆಡಿರುವ 10 ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಗೆದ್ದಿರುವ ಸುನಿಲ್ ಚೆಟ್ರಿ ಬಳಿಗ, ನಾಲ್ಕರಲ್ಲಿ ಡ್ರಾ ಸಾಧಿಸಿ, ಉಳಿದ ಐದು ಪಂದ್ಯಗಳಲ್ಲಿ ಪರಾಭವಗೊಂಡಿದೆ. ಕೇವಲ 7 ಅಂಕ ಸಂಪಾದಿಸಿರುವ ಬಿಎಫ್‌ಸಿ ಪಾಯಿಂಟ್‌ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು, 12 ಅಂಕಗಳೊಂದಿಗೆ ಚೆನ್ನೈಯಿನ್‌ ತಂಡ ಆರನೇ ಸ್ಥಾನದಲ್ಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.