ADVERTISEMENT

ಯುವ ಬಾಕ್ಸಿಂಗ್: ಭಾರತದ 6 ಮಂದಿ ಸೆಮಿಫೈನಲ್‌ಗೆ

ಪಿಟಿಐ
Published 13 ನವೆಂಬರ್ 2019, 20:09 IST
Last Updated 13 ನವೆಂಬರ್ 2019, 20:09 IST

ಉಲಾನ್‌ಬತಾರ್‌, ಮಂಗೋಲಿಯಾ: ಏಷ್ಯನ್‌ ಯೂತ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಆರು ಮಂದಿ ಬಾಕ್ಸಿಂಗ್‌ ಪಟುಗಳು ಬುಧವಾರ ಸೆಮಿಫೈನಲ್‌ಗೆ ಮುನ್ನಡೆದರು. ಆ ಮೂಲಕ ಇನ್ನಷ್ಟು ಪದಕಗಳನ್ನು ಗೆಲ್ಲುವುದು ಖಚಿತವಾಗಿದೆ. ಸೊಯ್‌ ಸೆಲಯ್‌ (49 ಕೆ.ಜಿ), ಅಮನ್‌ (+91 ಕೆ.ಜಿ), ಅಂಕಿತ್‌ ನರ್ವಾಲ್‌ (60 ಕೆ.ಜಿ), ನೊರೆಮ್‌ ಚಾನು (51 ಕೆ.ಜಿ), ಜಾಸ್ಮಿನ್‌ (57 ಕೆ.ಜಿ) ಮತ್ತು ವಿಂಕಾ (64 ಕೆ.ಜಿ) ಸೆಮಿಫೈನಲ್‌ ತಲುಪಿದವರು.

ನೇಹಾ ಕಾಸ್ನಿಯಾಲ್‌ (60 ಕೆ.ಜಿ) ಮತ್ತು ರೋಹಿತ್‌ ಮೊರ್‌ (52 ಕೆ.ಜಿ) ಎಂಟರ ಘಟ್ಟದ ಹೋರಾಟಗಳಲ್ಲಿ ಎದುರಾಳಿಗಳಿಗೆ ಮಣಿದರು. ಸೆಲಯ್‌, ಫಿಲಿಪೀನ್ಸ್‌ನ ಫ್ಲಿಂಟ್‌ ಜಾರಾ ವಿರುದ್ಧ 5–0ಯಿಂದ, ಅಮನ್‌, ತೈವಾನ್‌ನ ಕೈ– ಸುಂಗ್‌ ವಿರುದ್ಧ, ನರ್ವಾಲ್‌ 5–0 ಯಿಂದ ತೈವಾನ್‌ನ ಯು ಲಿನ್‌ ವಿರುದ್ಧ ಜಯಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಚಾನು 5–0 ಯಿಂದ ಕೊರಿಯಾ ಯುನ್ಸ ಸುನ್‌ ವಿರುದ್ಧ ಸುಲಭ ಜಯ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT