ADVERTISEMENT

ಅಂಧ ಮಗನಿಗೆ ತಾಯಿಯಿಂದ ಫುಟ್‌ಬಾಲ್ ವೀಕ್ಷಕ ವಿವರಣೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 20:08 IST
Last Updated 29 ಜನವರಿ 2019, 20:08 IST
   

ಸಾವೊ ಪೌಲೊ: ಆಟಗಾರರು ತೊಟ್ಟಿರುವ ಪೋಷಾಕು, ಶೂ, ಪ್ರತಿ ತಂಡಗಳು ಹೆಣೆದಿರುವ ತಂತ್ರಗಳು, ಚೆಂಡನ್ನು ಪಾಸ್ ಮಾಡುವ ವಿಧಾನಗಳನ್ನು ವಿವರಿಸುವ ತಾಯಿ ಬಳಿ ಕುಳಿತ ಮಗ, ಯಾವುದೇ ತಂಡ ಗೋಲು ಗಳಿಸಿದಾಗ ಪುಳಕಗೊಳ್ಳುತ್ತಾನೆ.

ಅಂಧ ಮಗ, 12 ವರ್ಷದ ನಿಕೋಲಾಸ್‌ಗೆ ಫುಟ್‌ಬಾಲ್ ಪಂದ್ಯದ ಸಂದರ್ಭದಲ್ಲಿ ವೀಕ್ಷಕ ವಿವರಣೆ ನೀಡಿ ರೋಮಾಂಚನಗೊಳಿಸುತ್ತಿರುವ ತಾಯಿ ಸಿಲ್ವಿಯಾ ಗ್ರೆಕೊ ಬ್ರೆಜಿಲ್‌ನಾದ್ಯಂತ ಈಗ ಫುಟ್‌ಬಾಲ್ ಪ್ರಿಯರ ಮನೆಮಾತಾಗಿದ್ದಾರೆ.

‘ಫುಟ್‌ಬಾಲ್‌ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಆದರೂ ಪಂದ್ಯದ ಸಂದರ್ಭದಲ್ಲಿ ಅನುಭವಕ್ಕೆ ಬರುವ ರೋಚಕತೆಯನ್ನು ಮಗನಿಗೆ ದಾಟಿಸುತ್ತೇನೆ. ತುಂಬ ಖುಷಿಯಾದಾಗ ಮಗ ಎದ್ದು ನಿಂತು ಕುಣಿಯುತ್ತಾನೆ’ ಎಂದು ಸಿಲ್ವಿಯಾ ಹೇಳುತ್ತಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.