ADVERTISEMENT

ಮಹಿಳಾ ವಿಶ್ವಕಪ್‌ ಆತಿಥ್ಯ: ಬಿಡ್‌ ಹಿಂಪಡೆದ ಬ್ರೆಜಿಲ್‌

ಏಜೆನ್ಸೀಸ್
Published 9 ಜೂನ್ 2020, 16:46 IST
Last Updated 9 ಜೂನ್ 2020, 16:46 IST
ಫುಟ್‌ಬಾಲ್‌
ಫುಟ್‌ಬಾಲ್‌   

ಸಾವೊ ಪಾಲೊ: 2023ರ ಮಹಿಳಾ ವಿಶ್ವಕಪ್ ಫುಟ್‌ಬಾಲ್‌ಗೆ ಆತಿಥ್ಯ ವಹಿಸುವ ಬಿಡ್‌ ಪ್ರಕ್ರಿಯೆಯಿಂದ ಬ್ರೆಜಿಲ್‌ ಹಿಂದೆ ಸರಿದಿದೆ. ಫಿಫಾಗೆ ಅಗತ್ಯವಿರುವ ಹಣಕಾಸಿನ ಭರವಸೆಯನ್ನುಕೋವಿಡ್‌–19 ಪಿಡುಗಿನ ಪರಿಣಾಮದಿಂದಾಗಿ ನೀಡಲು ತನಗೆ ಸಾಧ್ಯವಾಗುವುದಿಲ್ಲ ಎಂದು ಆ ದೇಶ ಹೇಳಿದೆ.

ಆದರೆ ಜಪಾನ್ ವಿರುದ್ಧ ಕೊಲಂಬಿಯಾ ಬಿಡ್ ಮತ್ತು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿ ಉಮೇದುವಾರಿಕೆಯನ್ನು ಬೆಂಬಲಿಸುವುದಾಗಿ ಬ್ರೆಜಿಲ್ ಫುಟ್‌ಬಾಲ್‌ ಫೆಡರೇಷನ್‌ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ದಕ್ಷಿಣ ಅಮೆರಿಕಾ ತಂಡಗಳಿಗೆ ಇದುವರೆಗೆ ಮಹಿಳಾ ವಿಶ್ವಕಪ್‌ ಆತಿಥ್ಯ ಒಲಿದಿಲ್ಲ.‌

ಇದೇ‌ 25ಕ್ಕೆ ಈ ಕುರಿತು ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ಕೋವಿಡ್‌ ಮಹಾಮಾರಿಯಿಂದಾಗಿ ಬ್ರೆಜಿಲ್‌ಗೆ ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.