ADVERTISEMENT

ಕೋವಿಡ್‌ನಿಂದ ಸಂಪೂರ್ಣ ಗುಣಮುಖ: ಸುನಿಲ್ ಚೆಟ್ರಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 13:41 IST
Last Updated 28 ಮಾರ್ಚ್ 2021, 13:41 IST
ಸುನಿಲ್ ಚೆಟ್ರಿ –ರಾಯಿಟರ್ಸ್ ಚಿತ್ರ
ಸುನಿಲ್ ಚೆಟ್ರಿ –ರಾಯಿಟರ್ಸ್ ಚಿತ್ರ   

ನವದೆಹಲಿ: ಕೊರೊನಾ ಸೋಂಕಿಗೆ ಒಳಗಾಗಿದ್ದ ತಾವು ಈಗ ಸಂಪೂರ್ಣ ಗುಣಮುಖರಾಗಿರುವುದಾಗಿ ಭಾರತ ಫುಟ್‌ಬಾಲ್ ತಂಡದ ನಾಯಕ ಮತ್ತು ಫಾರ್ವರ್ಡ್‌ ವಿಭಾಗದ ಆಟಗಾರ ಸುನಿಲ್ ಚೆಟ್ರಿ ಭಾನುವಾರ ತಿಳಿಸಿದ್ದಾರೆ.

ಇಂಡಿಯನ್ ಸೂ‍‍ಪರ್ ಲೀಗ್‌ (ಐಎಸ್‌ಎಲ್‌) ಟೂರ್ನಿಯಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವನ್ನು ಮುನ್ನಡೆಸಿದ್ದ ಚೆಟ್ರಿ ಅವರಿಗೆ ಮಾರ್ಚ್‌ 11ರಂದು ಕೋವಿಡ್‌–19 ಇರುವುದು ಖಾತರಿಯಾಗಿತ್ತು. ಹೀಗಾಗಿ ಒಮಾನ್ ಮತ್ತು ಯುಎಇ ಎದುರಿನ ಸೌಹಾರ್ದ ಪಂದ್ಯಗಳಲ್ಲಿ ಆಡದೇ ಇರಲು ನಿರ್ಧರಿಸಿದ್ದರು.

‘ಕೋವಿಡ್ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಎರಡು ಅಂತರರಾಷ್ಟ್ರೀಯ ಪಂದ್ಯಗಳಿಂದ ದೂರು ಉಳಿಯಬೇಕಾಗಿ ಬಂದಿದ್ದರಲ್ಲಿ ಬೇಸರವಿದೆ. ಆದರೆ ಈಗ ಮತ್ತೆ ಕಣಕ್ಕೆ ಇಳಿಯಲು ಸಜ್ಜಾಗಿದ್ದೇನೆ. ಬೇಗನೇ ಚೇತರಿಸಿಕೊಳ್ಳಿ ಎಂದು ಸಂದೇಶ ಕಳುಹಿಸಿದ ಎಲ್ಲರಿಗೂ ಅಭಾರಿಯಾಗಿದ್ದೇನೆ. ಎಲ್ಲರೂ ಮಾಸ್ಕ್‌ ಧರಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ’ ಎಂದು ಸುನಿಲ್ ಭಾನುವಾರ ಟ್ವೀಟ್ ಮಾಡಿದ್ದಾರೆ.

ADVERTISEMENT

36 ವರ್ಷದ ಚೆಟ್ರಿ ಎಎಫ್‌ಸಿ ಕಪ್‌ ಟೂರ್ನಿಯ ನಾಲ್ಕು ಆವೃತ್ತಿಯಲ್ಲಿ ಆಡಿದ್ದು 18 ಗೋಲುಗಳನ್ನು ಗಳಿಸಿದ್ದಾರೆ. 112 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 72 ಗೋಲು ಗಳಿಸಿದ್ದು ಈಗ ಆಡುತ್ತಿರುವವರ ಪೈಕಿ ಅತಿ ಹೆಚ್ಚು ಅಂತರರಾಷ್ಟ್ರೀಯ ಗೋಲು ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.