ADVERTISEMENT

ಎಐಎಫ್‌ಎಫ್‌: ಸಲಹಾ ಸಮತಿ ನೇಮಕ

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 14:16 IST
Last Updated 21 ಜೂನ್ 2022, 14:16 IST

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ನಿನ (ಎಐಎಫ್‌ಎಫ್‌) ಆಡಳಿತ ನೋಡಿಕೊಳ್ಳಲು 12 ಸದಸ್ಯರ ಸಲಹಾ ಸಮಿತಿಯನ್ನು ನೇಮಿಸಲಾಗಿದೆ.

ರಾಷ್ಟ್ರೀಯ ಕ್ರೀಡಾ ನೀತಿಯನ್ನು ಜಾರಿಗೊಳಿಸದೇ ಇದ್ದುದ್ದಕ್ಕೆ ಪ್ರಫುಲ್‌ ಪಟೇಲ್‌ ಅವರನ್ನು ಎಐಎಫ್‌ಎಫ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಆಡಳಿತ ಸಮಿತಿಯನ್ನು (ಸಿಒಎ) ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೇಮಕ ಮಾಡಿತ್ತು.

ಇದೀಗ ಸಿಒಎ, ಸಂಸ್ಥೆಯ ದೈನಂದಿನ ವ್ಯವಹಾರ ನೋಡಿಕೊಳ್ಳಲು ಅನುಕೂಲವಾಗುವಂತೆ ಸಲಹಾ ಸಮಿತಿಯನ್ನು ನೇಮಕ ಮಾಡಿದೆ. ಈ ಹಿಂದೆ ಐ–ಲೀಗ್‌ ತಂಡದ ಮಾಲೀಕರು ಆಗಿದ್ದ, ಉದ್ಯಮಿ ರಂಜಿತ್‌ ಬಜಾಜ್‌ ಅವರನ್ನು ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆ.

ADVERTISEMENT

ಸಮಿತಿಯು ಫೆಡರೇಷನ್ನಿನ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ವರದಿಯನ್ನು ಸಿಒಎಗೆ ಸಲ್ಲಿಸಬೇಕು.

ಫಿಫಾ ನಿಯೋಗ ಭೇಟಿ: ಎಐಎಫ್‌ಎಫ್‌ನಲ್ಲಿ ತಲೆದೋರಿರುವ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಫಿಫಾ ಮತ್ತು ಎಎಫ್‌ಸಿ ಪ್ರತಿನಿಧಿಗಳನ್ನೊಳಗೊಂಡ ಏಳು ಸದಸ್ಯರ ನಿಯೋಗ ಭಾರತಕ್ಕೆ ಬಂದಿದೆ. ಈ ನಿಯೋಗವು ಸಿಒಎ ಮತ್ತು ಹೊಸದಾಗಿ ನೇಮಕವಾಗಿರುವ ಸಲಹಾ ಸಮಿತಿ ಸದಸ್ಯರ ಜತೆ ಮಾತುಕತೆ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.