ADVERTISEMENT

ಕೋವಿಡ್–19 | ನಷ್ಟದಲ್ಲಿರುವ ಕ್ಲಬ್‌ಗಳಿಗೆ ಇಎಫ್‌ಎಲ್‌ನಿಂದ ₹ 420 ಕೋಟಿ ನೆರವು

ಏಜೆನ್ಸೀಸ್
Published 19 ಮಾರ್ಚ್ 2020, 11:19 IST
Last Updated 19 ಮಾರ್ಚ್ 2020, 11:19 IST
   

ಲಂಡನ್‌:ಕೊರೊನಾ ವೈರಸ್‌ ಸೋಂಕು ಭೀತಿಯಿಂದಾಗಿ ಇಂಗ್ಲೆಂಡ್ ಪ್ರಿಮಿಯರ್‌ ಲೀಗ್‌ ಅನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಏಪ್ರಿಲ್‌ ವರೆಗೆ ಮುಂದೂಡಲಾಗಿದೆ. ಇದರಿಂದನಷ್ಟ ಅನುಭವಿಸುತ್ತಿರುವ ಕ್ಲಬ್‌ಗಳಿಗೆ ನೆರವಾಗಲು ಇಂಗ್ಲೆಂಡ್‌ ಫುಟ್‌ಬಾಲ್‌ ಲೀಗ್‌ (ಇಎಫ್‌ಎಲ್‌) ಮುಂದಾಗಿದೆ.

‘ಇದುವರೆಗೆ (ಕೋವಿಡ್‌–19ಗೆ ಸಂಬಂಧಿಸಿದಂತೆ) ಒಂದೇಒಂದು ಪರಿಹಾರ ಸುಳಿವು ಕಂಡುಬಂದಿಲ್ಲ. ಹೀಗಾಗಿಕ್ಲಬ್‌ಗಳಿಗೆ ಮಧ್ಯಂತರ ಸಹಾಯಧನವಾಗಿ 50 ಮಿಲಿಯನ್‌ ಡಾಲರ್‌ (ಅಂದಾಜು ₹4,28 ಕೋಟಿ) ನೀಡಲು ತೀರ್ಮಾನಿಸಲಾಗಿದೆ’ ಎಂದು ಮಂಡಳಿ ಸಭೆ ಬಳಿಕಇಎಫ್‌ಎಲ್‌ ಹೇಳಿಕೆ ಬಿಡುಗಡೆ ಮಾಡಿದೆ.

2019ರ ಆಗಸ್ಟ್‌ 10 ರಂದು ಆರಂಭವಾಗಿರುವ ಟೂರ್ನಿಯನ್ನು ಇದೇ ತಿಂಗಳು 8ರಂದು ನಿಲ್ಲಿಸಲಾಗಿದೆ. ಜಾಗತಿಕ ಪಿಡುಗು ಕೊರೊನಾ ವೈರಸ್‌ನಿಂದ ಆಗುತ್ತಿರುವ ಪರಿಣಾಮಗಳ ಕುರಿತುಇಎಫ್‌ಎಲ್‌ ನಿರಂತರ ಅವಲೋಕನ ನಡೆಸುತ್ತಿದೆ.

ADVERTISEMENT

‘2019–20ರ ಲೀಗ್‌ ಅನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸುವ ಸಲುವಾಗಿ, ಸ್ಪರ್ಧೆಯ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಮೂಲ ಉದ್ದೇಶವಾಗಿದೆ. ಅದರೊಟ್ಟಿಗೆ ಆಟಗಾರರ ಆರೋಗ್ಯ ಸುರಕ್ಷತೆಗೂ ಗಮನ ನೀಡಲಾಗುತ್ತಿದೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.