ADVERTISEMENT

ಗೋವಾದಲ್ಲಿ ರೊನಾಲ್ಡೊ ಪ್ರತಿಮೆಗೆ ವಿರೋಧ

ಏಜೆನ್ಸೀಸ್
Published 31 ಡಿಸೆಂಬರ್ 2021, 13:14 IST
Last Updated 31 ಡಿಸೆಂಬರ್ 2021, 13:14 IST
ಕ್ರಿಸ್ಟಿಯಾನೊ ರೊನಾಲ್ಡೊ ಪ್ರತಿಮೆ –ಎಎಫ್‌ಪಿ ಚಿತ್ರ
ಕ್ರಿಸ್ಟಿಯಾನೊ ರೊನಾಲ್ಡೊ ಪ್ರತಿಮೆ –ಎಎಫ್‌ಪಿ ಚಿತ್ರ   

ಕಲಂಗೂಟ್‌, ಗೋವಾ: ಪೋರ್ಚುಗಲ್‌ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರತಿಮೆಯ ಮುಂದೆ ಸೇರಿದ ಪ್ರತಿಭಟನಾಕಾರರು ಕಪ್ಪು ಧ್ವಜಗಳನ್ನು ಹಿಡಿದುಕೊಂಡು ಘೋಷಣೆ ಕೂಗಿದರು. ಗೋವಾದಲ್ಲಿ ಆಡಳಿತ ನಡೆಸಿದ್ದ ಪೋರ್ಚುಗೀಸರು 1961ರಲ್ಲಿ ಈ ಪ್ರದೇಶವನ್ನು ಸ್ವತಂತ್ರಗೊಳಿಸಿದ್ದರು. ಅಂಥ ದೇಶದ ಆಟಗಾರನೊಬ್ಬನ ಪ್ರತಿಮೆ ಸ್ಥಾಪಿಸಿರುವ ಅಧಿಕಾರಿಗಳು ಭಾರತದ ಕ್ರೀಡಾಪಟುಗಳನ್ನು ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದರು.

’ಇದು ಅತ್ಯಂತ ಬೇಸರದ ಸಂಗತಿ. ಅಧಿಕಾರಿಗಳು ಇನ್ನು ಕೂಡ ಪೋರ್ಚುಗೀಸ್ ಆಡಳಿತದ ಗುಂಗಿನಲ್ಲೇ ಇದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ರೊನಾಲ್ಡೊ ಜಗತ್ತಿನ ಅತ್ಯುತ್ತಮ ಆಟಗಾರ ನಿಜ. ಆದರೆ ಇಲ್ಲಿ ಗೋವಾದ ಆಟಗಾರನೊಬ್ಬನ ಪ್ರತಿಮೆ ಇರಿಸಿದ್ದರೆ ಚೆನ್ನಾಗಿತ್ತು’ ಎಂದು ಗೋವಾದ ಆಟಗಾರ ಮಿಕ್ಕಿ ಫೆರ್ನಾಂಡಿಸ್ ಅಭಿಪ್ರಾಯಪಟ್ಟರು.

ADVERTISEMENT

ಗೋವಾವನ್ನು ಅತಿಕ್ರಮಿಸಿಕೊಂಡಿದ್ದ ಪೋರ್ಚುಗೀಸರ ವಿರುದ್ಧ 1961ರಲ್ಲಿ ಎರಡು ದಿನ ಯುದ್ಧ ಮಾಡಿ ಆ ಪ್ರದೇಶವನ್ನು ಭಾರತೀಯ ಸೇನೆ ಸ್ವತಂತ್ರಗೊಳಿಸಿತ್ತು. ಗೋವಾದಲ್ಲಿ ಈಗಲೂ ಪೋರ್ಚುಗೀಸರ ಪ್ರಭಾವ ಇದೆ. ಅಂದು ನಿರ್ಮಿಸಿದ ಕಟ್ಟಡಗಳು ಈಗಲೂ ಇದ್ದು ಪೋರ್ಚುಗಲ್ ಮೂಲದ ಅನೇಕ ಜನರು ವಾಸವಾಗಿದ್ದಾರೆ. 2017ರಲ್ಲಿ ಮಡೇರಾ ವಿಮಾನ ನಿಲ್ದಾಣದಲ್ಲಿ ರೊನಾಲ್ಡೊ ಅವರ ಪ್ರತಿಮೆ ಸ್ಥಾಪಿಸಿದಾಗಲೂ ವಿವಾದ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.