ADVERTISEMENT

ಪಿಫಾ ವಿಶ್ವಕಪ್ ವೈದ್ಯಕೀಯ ತಂಡದಲ್ಲಿ ತುಳುನಾಡ ಮಹಿಳೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 18:12 IST
Last Updated 25 ನವೆಂಬರ್ 2022, 18:12 IST
ಪ್ರತಿಭಾ ಎನ್.ದರ್ಖಾಸು
ಪ್ರತಿಭಾ ಎನ್.ದರ್ಖಾಸು   

ಮಂಗಳೂರು: ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ತಂಡದಲ್ಲಿ ತುಳುನಾಡಿನಪ್ರತಿಭಾ ಎನ್.ದರ್ಖಾಸು ಇದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಕುಡಂಬೆಟ್ಟು ಗ್ರಾಮದ ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿ ಅವರ ಪತ್ನಿ ಪ್ರತಿಭಾ ಎನ್.ದರ್ಖಾಸು ಅವರುಕತಾರ್‌ನ ಹಾಮದ್ ಮೆಡಿಕಲ್ ಕಾರ್ಪೋರೇಷನ್ ಸರ್ಕಾರಿ ಅಸ್ಪತ್ರೆಯ ಶುಶ್ರೂಷಕ ಸಿಬ್ಬಂದಿ. ವಿಶ್ವಕಪ್‌ ಟೂರ್ನಿಯಲ್ಲಿ ಗಾಯಾಳುಗಳ ಆರೈಕೆಗೆ ಆಸ್ಪತ್ರೆಯ ಒಂದು ಸಾವಿರ ಶುಶ್ರೂಷಕರನ್ನು ನೇಮಕ ಮಾಡಲಾಗಿದೆ. ಅವರಲ್ಲಿ ಪ್ರತಿಭಾ ಅವರೂ ಒಬ್ಬರು.

ಬಂಟ್ವಾಳ ತಾಲ್ಲೂಕು ಸಿದ್ಧಕಟ್ಟೆ ಸೂರಂಡೆ ನಿವಾಸಿಗಳಾದ ನಾರಾಯಣ ಪೂಜಾರಿ ಮತ್ತು ಶ್ರೀಮತಿ ದಂಪತಿಯ ಪುತ್ರಿಯಾದ ಪ್ರತಿಭಾ ಅವರು ವಾಮದಪದವಿನ ಕುಡಂಬೆಟ್ಟು ನಿವಾಸಿ ನವೀನ್ ಪೂಜಾರಿ ಅವರ ಪತ್ನಿ. ಕೆಲವು ವರ್ಷಗಳಿಂದ ಸಂಸಾರ ಸಮೇತ ಕತಾರ್‌ನ ದೋಹಾದಲ್ಲಿ ನೆಲೆಸಿದ್ದಾರೆ.

ADVERTISEMENT

ವಿಶ್ವಕಪ್ ಅಂಗಣದಿಂದ ದೂರವಾಣಿಯ ಮೂಲಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಪ್ರತಿಭಾ ‘ನಾನು ಫ್ಯಾನ್ ಝೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ವಿಶ್ವದ ನಾನಾ ತಂಡಗಳ ಅಭಿಮಾನಿಗಳ ಆರೋಗ್ಯದ ಕಾಳಜಿ ವಹಿಸುವ ತಂಡದಲ್ಲಿದ್ದೇನೆ. ಇಲ್ಲಿ ವಿಶ್ವಕಪ್ ಫುಟ್‌ಬಾಲ್‌ನ ಅಲೆ ಎದ್ದಿದ್ದು ನಾವೆಲ್ಲರೂ ಅದರಲ್ಲಿ ಸಂಭ್ರಮಿಸುತ್ತಿದ್ದೇವೆ. ದಕ್ಷಿಣ ಕನ್ನಡದ ಇನ್ನೂ ಕೆಲವು ಸಹೋದ್ಯೋಗಿಗಳು ನನ್ನೊಂದಿಗೆ ಇದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.