ADVERTISEMENT

ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿ: ಕ್ವಾರ್ಟರ್‌ ಪ್ರವೇಶಿಸಲು ಆರ್ಮಿ ವಿಫಲ

ಪಿಟಿಐ
Published 11 ಆಗಸ್ಟ್ 2025, 14:28 IST
Last Updated 11 ಆಗಸ್ಟ್ 2025, 14:28 IST
‌ಇಂಡಿಯನ್‌ ಆರ್ಮಿ ಎಫ್‌ಟಿ (ಕೆಂಪು) ಮತ್ತು ಲಡಾಕ್‌ ಎಫ್‌ಸಿ ತಂಡಗಳ ಆಟಗಾರರ ನಡುವೆ ಚೆಂಡಿಗಾಗಿ ಪೈಪೋಟಿ 
‌ಇಂಡಿಯನ್‌ ಆರ್ಮಿ ಎಫ್‌ಟಿ (ಕೆಂಪು) ಮತ್ತು ಲಡಾಕ್‌ ಎಫ್‌ಸಿ ತಂಡಗಳ ಆಟಗಾರರ ನಡುವೆ ಚೆಂಡಿಗಾಗಿ ಪೈಪೋಟಿ    

ಜಮ್ಶೆಡ್‌ಪುರ: ಇಂಡಿಯನ್‌ ಆರ್ಮಿ ತಂಡವು ಇಲ್ಲಿ ಸೋಮವಾರ ನಡೆದ 134ನೇ ಆವೃತ್ತಿಯ ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ 4–2 ಗೋಲುಗಳಿಂದ ಲಡಾಕ್‌ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿದರೂ ಕ್ವಾರ್ಟರ್‌ ಫೈನಲ್‌ಗೆ ಸ್ಥಾನ ಪಡೆಯಲು ವಿಫಲವಾಯಿತು.

ಎರಡು ಗೋಲುಗಳ ಹಿನ್ನಡೆಯಿಂದ ಅಮೋಘವಾಗಿ ಪುನರಾಗಮನ ಮಾಡಿದ ಆರ್ಮಿ ತಂಡವು ಸಿ ಗುಂಪಿನ ಕೊನೆಯ ಪಂದ್ಯದಲ್ಲಿ ಅಧಿಕಾರಯುತ ಜಯ ಗಳಿಸಿತು. ಆಡಿದ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು, ಆರು ಅಂಕ ಗಳಿಸಿದ ಆರ್ಮಿ ತಂಡದ ಅಭಿಯಾನಕ್ಕೆ ತೆರೆಬಿತ್ತು.

ಲಡಾಕ್‌ ತಂಡದ ಪರ ಪಿ. ಕಮಲೇಶ್‌ (23ನೇ) ಮತ್ತು ವಿಘ್ನೇಶ್ ವೇಲನ್ (37ನೇ) ಚೆಂಡನ್ನು ಗುರಿ ಸೇರಿಸಿದರು. ಆರ್ಮಿ ತಂಡದ ಪರ ಸಾಮ (41ನೇ ನಿ), ಅಭಿಷೇಕ್‌ ಶಂಕರ್‌ (45ನೇ), ಕ್ರಿಸ್ಟೋಫರ್ ಕಮೈ (51ನೇ) ಮತ್ತು ಅಪ್ಪು (55ನೇ) ಗೋಲು ಗಳಿಸಿದರು. 

ADVERTISEMENT

ಆರ್ಮಿ ತಂಡವು ಮೊದಲ ಪಂದ್ಯದಲ್ಲಿ 0–1ರಿಂದ ಜೆಮ್ಯೆಡ್‌ಪುರ ಎಫ್‌ಸಿ ವಿರುದ್ಧ ಸೋಲು ಅನುಭವಿಸಿತ್ತು. ನಂತರದಲ್ಲಿ 1–0ಯಿಂದ ತ್ರಿಭುವನ್ ಆರ್ಮಿ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿತ್ತು. ಮೂರೂ ಪಂದ್ಯಗಳನ್ನು ಗೆದ್ದು 9 ಅಂಕ ಗಳಿಸಿದ ಜೆಮ್ಯೆಡ್‌ಪುರ ತಂಡ ಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್‌ ಫೈನಲ್‌ಗೆ ಮುನ್ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.