ಗೋವಾ: ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಪಂದ್ಯ ಜಯಿಸುವ ಈಸ್ಟ್ ಬೆಂಗಾಲ್ ತಂಡದ ಮತ್ತೊಂದು ಪ್ರಯತ್ನಕ್ಕೆ ಫಲ ಸಿಗಲಿಲ್ಲ.
ತಿಲಕ್ ಮೈದಾನದಲ್ಲಿ ಗುರುವಾರ ನಡೆದ ಈಸ್ಟ್ ಬೆಂಗಾಲ್ ಮತ್ತು ಜೆಮ್‌ಶೆಡ್‌ಪುರ್ ಎಫ್‌ಸಿ ಮಧ್ಯ ನಡೆದ ಪಂದ್ಯವು ಗೋಲಿಲ್ಲದೇ ಡ್ರಾ ಆಯಿತು.
ಈಸ್ಟ್ ಬೆಂಗಾಲ್ ತಂಡವು ಇಲ್ಲಿಯವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಸೋತು ಮೂರರಲ್ಲಿ ಡ್ರಾ ಮಾಡಿಕೊಂಡಿದೆ. ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಐದು ಪಂದ್ಯಗಳನ್ನಾಡಿರುವ ಜೆಮ್‌ಶೆಡ್‌ಪುರ್ ತಂಡವು ಒಂದರಲ್ಲಿ ಗೆದ್ದಿದೆ. ಮೂರು ಡ್ರಾ ಮಾಡಿಕೊಂಡಿದೆ. ಅದರಿಂದಾಗಿ ಆರು ಪಾಯಿಂಟ್ಸ್‌ನೊಂದಿಗೆ ಐದನೇ ಸ್ಥಾನದಲ್ಲಿದೆ.
ಎರಡೂ ತಂಡಗಳ ನಡುವೆ ಬಿರುಸಿನ ಹಣಾಹಣಿ ಇತ್ತು. ಇದರಿಂದಾಗಿ ಕೆಲವು ಆಟಗಾರರಿಂದ ಒರಟು ಆಟ ಮತ್ತು ಕೆಟ್ಟ ನಡವಳಿಕೆಗಳು ಕಂಡುಬಂದವು.
24ನೇ ನಿಮಿಷದಲ್ಲಿ ಬೆಂಗಾಲ್ ತಂಡದ ಪ್ರಮುಖ ಆಟಗಾರ ಯುಗೇನ್ಸನ್ ಲಿಂಗ್ದೊ ಕೆಂಪು ಕಾರ್ಡ್ ದರ್ಶನ ಮಾಡಿದರು. ಎದುರಾಳಿ ತಂಡದ ಲಾಲ್ದಿಮಿಲಾನಾ ರೆಂಥೆಲ್ (90+2) ಕೂಡ ಕೆಂಪು ಕಾರ್ಡ್ ನೋಡಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.