ADVERTISEMENT

ಐಎಸ್‌ಎಲ್‌: ಪ್ರಸಾರದ ಹಕ್ಕು ಫ್ಯಾನ್‌ಕೋಡ್‌ ಪಾಲು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 1:13 IST
Last Updated 3 ಫೆಬ್ರುವರಿ 2026, 1:13 IST
.
.   

ಬೆಂಗಳೂರು: ಇದೇ 14ರಂದು ಆರಂಭವಾಗಲಿರುವ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯಗಳ ಪ್ರಸಾರದ ಹಕ್ಕುಗಳನ್ನು ಫ್ಯಾನ್‌ಕೋಡ್‌ ಸಂಸ್ಥೆ ಖರೀದಿಸಿದೆ. ನಿರ್ಮಾಣ ಹಕ್ಕು ಕೆಲಿಡೊಸ್ಕೋಪ್ ಸ್ಟುಡಿಯೊಸ್‌ (ಕೆಪಿಎಸ್‌) ಸಂಸ್ಥೆಯ ಪಾಲಾಗಿದೆ.

ಟೆಲಿವಿಷನ್, ಡಿಜಿಟಲ್ ಮಾಧ್ಯಮ ಹಾಗೂ ನಿರ್ಮಾಣ ಹಕ್ಕುಗಳಿಗೆ ಫ್ಯಾನ್‌ಕೋಡ್‌ ₹8.62 ಕೋಟಿ ಬಿಡ್‌ ಸಲ್ಲಿಸಿತ್ತು. ಎಬಿಪಿ ನೆಟ್‌ವರ್ಕ್‌ (₹6.89 ಕೋಟಿ– ಡಿಜಿಟಲ್‌ ಹಾಗೂ ನಿರ್ಮಾಣ ಹಕ್ಕು), ಜಿಯೊ ಟಿವಿ (₹5 ಕೋಟಿ– ಡಿಜಿಟಲ್‌ ಹಕ್ಕು) ಹಾಗೂ ಕೆಪಿಎಸ್‌ (₹5.25 ಕೋಟಿ– ನಿರ್ಮಾಣ ಹಕ್ಕು) ಸಂಸ್ಥೆಗಳು ಅಂತಿಮ ಬಿಡ್‌ನಲ್ಲಿ ಭಾಗವಹಿಸಿದ್ದವು.

ಕಳೆದ ಬಾರಿ, ವಯಾಕಾಮ್‌ ಸಂಸ್ಥೆಯು ವಾರ್ಷಿಕ ₹275 ಕೋಟಿಯಂತೆ 2023–24 ಹಾಗೂ 2024–25ನೇ ಸಾಲಿನ ಐಎಸ್‌ಎಲ್‌ ಲೀಗ್‌ ಪಂದ್ಯಗಳ ನೇರಪ್ರಸಾರದ ಹಕ್ಕುಗಳನ್ನು ಖರೀದಿಸಿತ್ತು. ಆದರೆ, ಈ ಬಾರಿ ಲೀಗ್‌ ವಿಳಂಬವಾಗಿದ್ದು, ಪ್ರಸಾರದ ಹಕ್ಕುಗಳು ಗಣನೀಯವಾಗಿ ಕಡಿಮೆ ಮೊತ್ತಕ್ಕೆ ಮಾರಾಟವಾಗಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.