ADVERTISEMENT

ಫುಟ್‌ಬಾಲ್‌: ಎಫ್‌ಸಿ ಡೆಕ್ಕನ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 20:23 IST
Last Updated 25 ಜನವರಿ 2021, 20:23 IST
ಸ್ಟೂಡೆಂಟ್ಸ್ ಯೂನಿಯನ್‌ ಎಫ್‌ಸಿಯ ವೈ. ತರುಣ್‌ಕುಮಾರ್ ರೆಡ್ಡಿ (ಎಡ) ಹಾಗೂ ಕಿಕ್‌ಸ್ಟಾರ್ಟ್‌ ಎಫ್‌ಸಿ ಸುಧೀರ್ ಕೋಟಿಕೇಲ ನಡುವೆ ಚೆಂಡಿಗಾಗಿ ಪೈಪೋಟಿ– ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್‌
ಸ್ಟೂಡೆಂಟ್ಸ್ ಯೂನಿಯನ್‌ ಎಫ್‌ಸಿಯ ವೈ. ತರುಣ್‌ಕುಮಾರ್ ರೆಡ್ಡಿ (ಎಡ) ಹಾಗೂ ಕಿಕ್‌ಸ್ಟಾರ್ಟ್‌ ಎಫ್‌ಸಿ ಸುಧೀರ್ ಕೋಟಿಕೇಲ ನಡುವೆ ಚೆಂಡಿಗಾಗಿ ಪೈಪೋಟಿ– ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್‌   

ಬೆಂಗಳೂರು: ಸಜೀಶ್‌ ಇ. (10ನೇ ಹಾಗೂ 70ನೇ ನಿಮಿಷ) ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಎಫ್‌ಸಿ ಡೆಕ್ಕನ್ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಪಂದ್ಯದಲ್ಲಿ ಸೋಮವಾರ ಯಂಗ್ ಚಾಲೆಂಜರ್ಸ್‌ ಎಫ್‌ಸಿ ತಂಡವನ್ನು 6–2ರಿಂದ ಸೋಲಿಸಿತು.

ವಿಜೇತ ತಂಡದ ಪರ ಸೂರ್ಯ ವಿ.ಕೆ. (26ನೇ ನಿ.), ಕವಿಯರಸನ್‌ (47ನೇ ನಿ.), ಸ್ಟಾಲಿನ್‌ ಡೇನಿಯಲ್‌ (82ನೇ ನಿ.) ಹಾಗೂ ಡಿ.ಎಂ.ಅಂಥೋನಿ (90ನೇ ನಿಮಿಷ) ಗೋಲು ದಾಖಲಿಸಿದರು. ಯಂಗ್ ಚಾಲೆಂಜರ್ಸ್ ತಂಡದ ದೀಪನ್ ಪ್ರಕಾಶ್ (50ನೇ ನಿ.) ಹಾಗೂ ಅಂಥೊನಿ ಪಿ.(50ನೇ ನಿ.) ಕಾಲ್ಚಳಕ ತೋರಿದರು.

ಮತ್ತೊಂದು ಪಂದ್ಯದಲ್ಲಿ ಸ್ಟೂಡೆಂಟ್ಸ್ ಯೂನಿಯನ್ ಎಫ್‌ಸಿ ತಂಡವು 1–0ಯಿಂದ ಕಿಕ್‌ಸ್ಟಾರ್ಟ್‌ ಎಫ್‌ಸಿಯನ್ನು ಮಣಿಸಿತು. ಸ್ಟೂಡೆಂಟ್ಸ್ ಯೂನಿಯನ್ ಪರ ಲೋಕೇಶ್‌ (28ನೇ ನಿ.) ಗೋಲು ಹೊಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.